Manjushree's Kairuchi
Untitled Document

ಬೀಟ್ರೂಟ್ ಓಟ್ಸ್ ದೋಸೆ

Image
  • ಶೈಲಿ :ದಕ್ಷಿಣ ಭಾರತ
  • ಸರ್ವ್ :4
  • ಸಮಯ :10-12 ಗಂಟೆಗಳು

ಬೇಕಾಗುವ ಸಾಮಗ್ರಿಗಳು

  • ಬೀಟ್ರೂಟ್ ೨
  • ದೋಸೆ ಅಕ್ಕಿ ೧ ದೊಡ್ಡ ಕಪ್ ಉದ್ದಿನ ಬೇಳೆ ೨ ಟೇಬಲ್ ಚಮಚ ಪುಡಿ ಮಾಡಿದ ಓಟ್ಸ್ ೧ ಸಣ್ಣ ಕಪ್
  • ಉಪ್ಪು ರುಚಿಗೆ ತಕ್ಕಷ್ಟು
  • ತುಪ್ಪ ಅಥವಾ ಬೆಣ್ಣೆ ೪ ಟೇಬಲ್ ಚಮಚ

ಮಾಡುವ ವಿಧಾನ

"ಬೀಟ್ರೂಟ್ ಓಟ್ಸ್ ದೋಸೆ "  ಕಡಿಮೆ ಕ್ಯಾಲೋರಿ ಮತ್ತು ಕಬ್ಬಿಣದ ಅಂಶವನ್ನು ಹೇರಳವಾಗಿ  ಹೊಂದಿರುವ ಆರೋಗ್ಯಕರ ದಕ್ಷಿಣ ಭಾರತ ಶೈಲಿಯ ಬೆಳಗಿನ ಉಪಹಾರ, ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳನ್ನು ವಿವರಿಸಿದ್ದೇನೆ, ಮಾಡಿ ಅಭಿಪ್ರಾಯ ತಿಳಿಸಿ.

ಅಕ್ಕಿ ಮತ್ತು  ಉದ್ದಿನಬೇಳೆಯನ್ನು ತೊಳೆದು ೪ ರಿಂದ ೫ ಗಂಟೆಗಳ ಕಾಲ ನೆನೆ ಹಾಕಿ.
ಬೀಟ್ರೂಟ್ ಅನ್ನು ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
ನೆನೆಸಿದ ಅಕ್ಕಿ ಮತ್ತು ಬೀಟ್ರೂಟ್  ಸೇರಿಸಿ ನುಣ್ಣಗೆ ಉದ್ದಿನದೋಸೆ ಹಿಟ್ಟಿನ ಹದಕ್ಕೆ ರುಬ್ಬಿ, ೭ ರಿಂದ ೮ ಗಂಟೆಯ ಕಾಲ ಬಿಡಿ.
ನಂತರ ಅದಕ್ಕೆ ಉಪ್ಪು ಮತ್ತು ಓಟ್ಸ್ ಪುಡಿ ಸೇರಿಸಿ ಚೆನ್ನಾಗಿ ಹೊಂದಿಸಿ. 
ತವಾ ಬಿಸಿಮಾಡಿ ತೆಳ್ಳಗೆ ದೋಸೆ ಹಾಕಿ ಮೇಲಿಂದ ತುಪ್ಪ ಹಾಕಿ ಬೇಯಿಸಿ.
ಇದನ್ನು ಚಟ್ನಿ ಜೊತೆ ಸರ್ವ್ ಮಾಡಿ. 

comments powered by Disqus