"ಪಾಲಕ್ ಪನೀರ್ ದೋಸೆ" ದಕ್ಷಿಣ ಭಾರತದ ರುಚಿಕರ ಬೆಳಗಿನ ಉಪಹಾರ.
ಮೊದಲು ದೋಸೆ ಅಕ್ಕಿ, ಉದ್ದಿನಬೇಳೆ, ಮೆಂತೆ ಹಾಗು ಕಡಲೇಬೇಳೆಯನ್ನು ೪ ರಿಂದ ೫ ಗಂಟೆಗಳ ಕಾಲ ನೆನೆಹಾಕಿ
ನಂತರ ಪಾಲಕ್ ಸೊಪ್ಪಿನ ಜೊತೆಗೆ ನುಣ್ಣಗೆ ರುಬ್ಬಿ, ಉಪ್ಪು ಸೇರಿಸಿ ...೭ ರಿಂದ ೮ ಗಂಟೆಯ ಕಾಲ ಹಾಗೆಯೇ ಬಿಡಿ.
ಒಂದು ಬಾಣಲೆಯಲ್ಲಿ ಒಂದು ದೊಡ್ಡ ಚಮಚತುಪ್ಪವನ್ನು ಬಿಸಿ ಮಾಡಿ , ಅದಕ್ಕೆ ಸೋಂಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ ಮತ್ತು ಹಸಿ ಬಟಾಣಿ ಸೇರಿಸಿ ಹುರಿಯಿರಿ.
ಈಗ ಅದಕ್ಕೆ ಉಪ್ಪು, ಗರಂ ಮಸಾಲೆ ಪುಡಿ, ತುರಿದ ಪನೀರ್ ಮತ್ತು ಕೊತ್ತೊಂಬರಿ ಸೊಪ್ಪು ಸೇರಿಸಿ ಹೊಂದಿಸಿ.
ದೋಸೆ ಕಾವಲಿಗೆ ಬಿಸಿ ಮಾಡಿ ..ತೆಳುವಾಗಿ ದೋಸೆ ಮಾಡಿ, ಮೇಲಿನಿಂದ ತುಪ್ಪ ಹಾಕಿ ಬೇಯಿಸಿ.
ಕೊನೆಯಲ್ಲಿ ಪನೀರ್ ಮಿಶ್ರಣವನ್ನು ಮದ್ಯದಲ್ಲಿ ಹಾಕಿ ಚಟ್ನಿ ಜೊತೆಗೆ ಸರ್ವ್ ಮಾಡಿ.