Manjushree's Kairuchi
Untitled Document

ಡೊಳ್ಳುಮೆಣಸಿನ ಮಸಾಲೆ ಪಲ್ಯ

Image
  • ಶೈಲಿ :ಮಲೆನಾಡು
  • ಸರ್ವ್ :4
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಡೊಳ್ಳುಮೆಣಸು / ದೊಣ್ಣೆಮೆಣಸು / ಕ್ಯಾಪ್ಸಿಕಂ ೪-೫
  • ಈರುಳ್ಳಿ ೨
  • ಕರಿಬೇವು ಸ್ವಲ್ಪ
  • ಎಣ್ಣೆ ೨ ಟೇಬಲ್ ಚ
  • ಸಾಸಿವೆ ೧ ಟೀ ಚ
  • ಇಂಗು ೧/೪ ಟೀ ಚ
  • ಅರಿಶಿನ ಚಿಟಿಕೆ
  • ಉಪ್ಪು ರುಚಿಗೆ ತಕ್ಕಷ್ಟು
  • ತಾಜಾ ತೆಂಗಿನತುರಿ ೧/೪ ಕಪ್
  • ಕೊತ್ತೊಂಬರಿ ಸೊಪ್ಪು
  • ಮಸಾಲೆ ಪುಡಿಗೆ :-
  • ಕೊತ್ತೊಂಬರಿ ಬೀಜ ೧ ಟೇಬಲ್ ಚ
  • ಜೀರಿಗೆ ೧ ಟೀ ಚ
  • ಕಡಲೆಬೇಳೆ ೧ ಟೇಬಲ್ ಚ
  • ಉದ್ದಿನಬೇಳೆ ೧ ಟೇಬಲ್ ಚ
  • ಬಿಳಿ ಯಳ್ಳು ೧ ಟೇಬಲ್ ಚ
  • ಲವಂಗ ೨
  • ಚಕ್ಕೆ ಸಣ್ಣ ಚೂರು
  • ಬ್ಯಾಡಗಿ ಒಣಮೆಣಸು ೪-೫
  • ಹುಣಸೆಹಣ್ಣು ೧ ನೆಲ್ಲಿಗಾತ್ರದ ಉಂಡೆ

ಮಾಡುವ ವಿಧಾನ

ಡೊಳ್ಳುಮೆಣಸು ಇದನ್ನು ದೊಣ್ಣೆಮೆಣಸು, ಕ್ಯಾಪ್ಸಿಕಂ ಅಂತಲೂ ಕರೆಯುತ್ತಾರೆ, ಪರಿಮಳಭರಿತ ಈ ಮೆಣಸಿನಿಂದ ಏನೇ ಮಾಡಿದರು ತಿನ್ನಲು ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಇದು  ಉತ್ತರ ಕನ್ನಡ, ಉತ್ತರ ಕರ್ನಾಟಕದ ಕಡೆ ಪ್ರಸಿದ್ಧಿಯನ್ನು ಪಡೆದಿದೆ, ಅಲ್ಲಿ ಸ್ವಲ್ಪ ಬೇರೆ ತರಹದ ಡೊಳ್ಳುಮೆಣಸು ದೊರೆಯುತ್ತದೆ ಹೊರಗಿನ ಸಿಪ್ಪೆ ಸ್ವಲ್ಪ ತೆಳುವಾಗಿದ್ದು ಸ್ವಲ್ಪ ಖಾರವು ಇರುತ್ತದೆ. ಈ ಮಸಾಲೆ ಪಲ್ಯ ಮಾಡಲು ತುಂಬಾ ಸುಲಭ ಹಾಗು ಅಕ್ಕಿರೊಟ್ಟಿ, ಅನ್ನ, ಚಪಾತಿಯ ಜೊತೆಗೆ ತುಂಬಾ ಚೆನ್ನಾಗಿ ಇರುತ್ತದೆ. ಮಾಡುವ ವಿಧಾನ ಹಾಗು ಬೇಕಾಗುವಸಾಮಗ್ರಿಗಳನ್ನು ವಿವರಿಸಿದ್ದೇನೆ, ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ಈರುಳ್ಳಿ ಮತ್ತು ಡೊಳ್ಳುಮೆಣಸನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಿ.
ಮಸಾಲೆಗೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಎಣ್ಣೆ ಹಾಕದೆ ಹುರಿದು ಪುಡಿಮಾಡಿ.
ಈಗ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಅದಕ್ಕೆ ಸಾಸಿವೆ, ಇಂಗು, ಅರಿಶಿನ ಹಾಗು ಕರಿಬೇವು ಹಾಕಿ ಸಿಡಿಸಿ.
ಅದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಡೊಳ್ಳುಮೆಣಸು / ದೊಣ್ಣೆಮೆಣಸು / ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಬೇಯುವವರೆಗೆ ಹುರಿಯಿರಿ.
ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಮಾಡಿಟ್ಟ ಮಸಾಲೆಪುಡಿ, ಹಸಿ ತೆಂಗಿನತುರಿ ಮತ್ತು ಕೊತ್ತೊಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಹೊಂದಿಸಿ. 

 

comments powered by Disqus