Manjushree's Kairuchi
Untitled Document

ಸಬ್ಬಸಿಗೆ ಓಟ್ಸ್ ಕಿಚಡಿ

Image
  • ಶೈಲಿ :ಫ್ಯೂಶನ್
  • ಸರ್ವ್ :2
  • ಸಮಯ :45 ನಿಮಿಷಗಳು

ಬೇಕಾಗುವ ಸಾಮಗ್ರಿಗಳು

  • ಸಬ್ಬಸಿಗೆ ಸೊಪ್ಪು ೧/೨ ಗೊಂಚಲು
  • ಈರುಳ್ಳಿ 1
  • ಓಟ್ಸ್ 1/2 ಕಪ್
  • ನೆನೆಸಿದ ಹೆಸರುಕಾಳು 1/4 ಕಪ್
  • ಕ್ಯಾಪ್ಸಿಕಂ ೧/೨
  • ಹಸಿಮೆಣಸು 2
  • ಕ್ಯಾರೆಟ್ 2 ಟೇ ಚ
  • ಬೀನ್ಸ್ 2 ಟೇ ಚ
  • ಆಲೂಗಡ್ಡೆ 2 ಟೇ ಚ
  • ಹಸಿಬಟಾಣಿ ೧/೪ ಕಪ್
  • ಟೊಮ್ಯಾಟೋ 1
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇ ಚ
  • ಉಪ್ಪು ರುಚಿಗೆ ತಕ್ಕಷ್ಟು
  • ಜೀರಿಗೆ 1 ಟೀ ಚ
  • ಕರಿಬೇವು ಸ್ವಲ್ಪ
  • ಅರಿಶಿನ ಚಿಟಿಕೆ
  • ತುಪ್ಪ 2 ಟೇ ಚ
  • ಗರಂ ಮಸಾಲ ಪುಡಿ 1 ಟೇ ಚ

ಮಾಡುವ ವಿಧಾನ

"ಸಬ್ಬಸಿಗೆ ಓಟ್ಸ್ ಕಿಚಡಿ " ಕಡಿಮೆ ಕ್ಯಾಲೋರಿ ಬೆಳಗಿನ ಉಪಹಾರ ಬಯಸುವವರಿಗೆ ಹೇಳಿ ಮಾಡಿಸಿದ ರುಚಿಕರ ತಿಂಡಿ. ಮಾಡುವ ವಿಧಾನ ಕೆಳಗೆ ತಿಳಿಸಲಾಗಿದೆ, ಮಾಡಿ ಅಭಿಪ್ರಾಯ ತಿಳಿಸಿ. 

ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಜೀರಿಗೆ, ಹಸಿಮೆಣಸು, ಶುಂಠಿಬೆಳ್ಳುಳ್ಳಿ ಪೇಸ್ಟ್ ಹಾಗು ಕರಿಬೇವು ಸೇರಿಸಿ ಹುರಿದು, ಅದಕ್ಕೆ  ಈರುಳ್ಳಿ , ಟೊಮ್ಯಾಟೋ, ಅರಿಶಿನ ಹಾಗು ಹೆಚ್ಚಿದ ತರಕಾರಿ,  ಸಬ್ಬಸಿಗೆ ಸೊಪ್ಪು ಹಾಕಿ  ಬಾಡಿಸಿ.
ನಂತರ ಅದಕ್ಕೆ ನೆನೆಸಿದ ಹೆಸರುಕಾಳು, ಓಟ್ಸ್, ಗರಂ ಮಸಾಲ, ಉಪ್ಪು  ಹಾಗು  ೩ ರಿಂದ ೪ ಕಪ್ ನೀರು ಹಾಕಿ ೩ ರಿಂದ ೪ ವಿಸೇಲ್ ಕೂಗಿಸಿ.
ಬಿಸಿ ಬಿಸಿ ಕಿಚಿಡಿ ಯನ್ನು ತುಪ್ಪದ ಜೊತೆ ಸರ್ವ್ ಮಾಡಿ. ಬೇಕಿದ್ದರೆ ಲಿಂಬೆರಸವನ್ನು ಕೊನೆಯಲ್ಲಿ ಹಾಕಿಕೊಳ್ಳಬಹುದು 

comments powered by Disqus