Manjushree's Kairuchi
Untitled Document

ಚೀಸ್ ಕಾರ್ನ್ ಪರಾಟ

Image
  • ಶೈಲಿ :ಫ್ಯೂಶನ್
  • ಸರ್ವ್ :6
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಗೋಧಿ ಹಿಟ್ಟು ೧ ಕಪ್
  • ಉಪ್ಪು ರುಚಿಗೆ
  • ಬೆಣ್ಣೆ ೨ ಟೇ ಚಮಚ
  • ಮುಸುಕಿನ ಜೋಳ ೧ ಕಪ್
  • ಸೋಂಪು ೧ ಟೀ ಚಮಚ
  • ಹಸಿಮೆಣಸು ೧
  • ಕೊತ್ತೊಂಬರಿ ಸೊಪ್ಪು
  • ಕರಿಬೇವಿನ ಸೊಪ್ಪು
  • ಅಮ್ಚುರ್ ಪುಡಿ ೧/೨ ಟೀ ಚಮಚ
  • ಈರುಳ್ಳಿ ೧
  • ಹೆಚ್ಚಿದ ಶುಂಟಿ ೧ ಟೀ ಚಮಚ
  • ತುರಿದ ಚೀಸ್ ೧/೪ ಕಪ್
  • ಒರಿಗ್ಯಾನೋ ೧ ಟೀ ಚ

ಮಾಡುವ ವಿಧಾನ

"ಕಾರ್ನ್ ಚೀಸ್ ಪರಾಟ" ಮಕ್ಕಳು ತುಂಬಾ ಇಷ್ಟಪಡುವ ಟಿಫನ್ ಬಾಕ್ಸ್ ಗೆ ಕಳಿಸುವಂತಹ ಒಂದು ತಿಂಡಿ. 

ಗೋಧಿಹಿಟ್ಟು, ಉಪ್ಪು ಮತ್ತು ಸ್ವಲ್ಪ ಬೆಣ್ಣೆ ಸೇರಿಸಿ ಮಿಕ್ಸ್ ಮಾಡಿ ನಂತರ ಅದಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ.

ಜೋಳವನ್ನು ಬೇಯಿಸಿ ಮಿಕ್ಸರ್ ನಲ್ಲಿ ತರಿ ತರಿ ರುಬ್ಬಿಟ್ಟುಕೊಳ್ಳಿ. (ನಾನು ಇಲ್ಲಿ ನಮ್ಮ ಮುಸುಕಿನ ಜೋಳವನ್ನು ಉಪಯೋಗಿಸಿದ್ದೇನೆ).

ನಂತರ ಅದಕ್ಕೆ ಹೆಚ್ಚಿದ ಹಸಿಮೆಣಸು, ಸೋಂಪು,ಶುಂಟಿ,ಕರಿಬೇವು,ಕೊತ್ತೊಂಬರಿ ಸೊಪ್ಪು,ಹೆಚ್ಚಿದ ಈರುಳ್ಳಿ, ಅಮ್ಚುರ್ ಪುಡಿ,ತುರಿದ ಚೀಸ್, ಒರಿಗ್ಯಾನೋ ಹಾಗು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಲಿಂಬೆ ಗಾತ್ರದ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ.

ನಂತರ ಗೊಧಿಹಿಟ್ಟನ್ನು ಕೂಡ ಲಿಂಬೆ ಗಾತ್ರದ ಉಂಡೆಗಳಾಗಿ ಮಾಡಿ ಅದರ ಒಳಗೆ ಜೋಳದ ಉಂಡೆಗಳನ್ನು ತುಂಬಿ ಲಟ್ಟಿಸಿ, ತವಾದ ಮೇಲೆ ಬೆಣ್ಣೆ ಹಾಕಿ ಬೇಯಿಸಿ.

comments powered by Disqus