Manjushree's Kairuchi
Untitled Document

ಚಾಕೋ ಚಿಪ್ಸ್ ಕುಕ್ಕಿಸ್

Image
  • ಶೈಲಿ :ಅಮೇರಿಕಾ
  • ಸರ್ವ್ :15
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಮೈದಾ ೧ ಕಪ್
  • ಬೇಕಿಂಗ್ ಪೌಡರ್ & ಬೇಕಿಂಗ್ ಸೋಡಾ ಚಿಟಿಕೆ
  • ಚಿಟಿಕೆ ಉಪ್ಪು
  • ಬೆಣ್ಣೆ ೩/೪ ಕಪ್
  • ಸಕ್ಕರೆ ಪುಡಿ ೧/೨ ಕಪ್
  • ವೆನಿಲ್ಲಾ ಎಸೆನ್ಸ್ ೧ ಟೀ ಸ್ಪೂನ್
  • ಹಾಲು ೨ ಟೇಬಲ್ ಸ್ಪೂನ್
  • ಚಾಕಲೇಟ್ ಚಿಪ್ಸ್ ೧/೨ ಕಪ್

ಮಾಡುವ ವಿಧಾನ

ಓವೆನ್ ಅನ್ನು ಮೊದಲು ಬಿಸಿ ಮಾಡಿ 180°C/ 350 °F/ .

ಮೊದಲು ಬೆಣ್ಣೆ ಹಾಗು ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಮೇಲೆ ಹೇಳಿದ ಉಳಿದ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಹೊಂದಿಸಿ, ಫ್ರೀಜ್ ನಲ್ಲಿ ೧೫ ರಿಂದ ೨೦ ನಿಮಿಷ ಬಿಡಿ .

ನಂತರ ಅದನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಮದ್ಯೆ ಸ್ವಲ್ಪ ಒತ್ತಿ, ಗ್ರೀಸ್ ಮಾಡಿದ ಶೀಟ್ ಮೇಲೆ ಇಟ್ಟು ಮೊದಲೇ ಬಿಸಿಮಾಡಿದ ಓವೆನ್ ನಲ್ಲಿ ೧೫ ರಿಂದ ೨೦ ನಿಮಿಷ ಬೇಯಿಸಿ.

ಪ್ರೆಷರ್ ಕುಕ್ಕರ್ ನಲ್ಲಿ ಮಾಡುವದಾದರೆ ಮೊದಲು ಕುಕ್ಕರ್ ನ ಬಿಸಿಮಾಡಿ, ನಂತರ ಒಂದು ಖಾಲಿ ಪಾತ್ರೆ ಇಟ್ಟು ಅದರ ಮೇಲೆ ಕುಕೀಸ್ ಇದ್ದ ಪ್ಲೇಟ್ ಇಟ್ಟು, ಮುಚ್ಚಿ, ಮದ್ಯಮ ಉರಿಯಲ್ಲಿ ೪೦ ರಿಂದ ೪೫ ನಿಮಿಷ ಬೇಯಿಸಿ.(ಕುಕ್ಕರ್ ನ ವಿಷೆಲ್ ಹಾಗು ಗ್ಯಾಸ್ಕೆಟ್ ಹಾಕಬಾರದು ಹಾಗೆಯೇ ಮುಚ್ಚಳ ಮುಚ್ಚಿ ಬೇಯಿಸಿ).

comments powered by Disqus