Manjushree's Kairuchi
Untitled Document

ಟುಟಿ ಫ್ರುಟಿ ಕುಕೀಸ್

Image
  • ಶೈಲಿ :ಹೈದರಾಬಾದ್
  • ಸರ್ವ್ :25
  • ಸಮಯ :1.30 ಗಂಟೆಗಳು

ಬೇಕಾಗುವ ಸಾಮಗ್ರಿಗಳು

  • ಮೈದಾ ಹಿಟ್ಟು ೧ ಕಪ್
  • ಬೆಣ್ಣೆ ೧/೨ ಕಪ್
  • ಸಕ್ಕರೆ ಪುಡಿ ೧/೨ ಕಪ್
  • ಕಸ್ಟರ್ಡ್ ಪೌಡರ್(ವೆನಿಲ್ಲಾ) ೪ ದೊಡ್ಡ ಚ
  • ಬೇಕಿಂಗ್ ಪೌಡರ್ ಚಿಟಿಕೆ
  • ಟುಟಿ ಫ್ರುಟಿ ೧/೪ ಕಪ್
  • ಫೈನ್ ಆಪಲ್ ಎಸೆನ್ಸ್ ೧ ಟೀ ಚ
  • ಉಪ್ಪು ೧/೪ ಟೀ ಚ
  • ಏಲಕ್ಕಿ ಪುಡಿ ೧/೨ ಟೀ ಚ
  • ಹಾಲು ೨ ದೊಡ್ಡ ಚ

ಮಾಡುವ ವಿಧಾನ

ಇದು ಭಾರತದಲ್ಲಿ ಸಿಗುವ ಕುಕೀಸ್ ಗಳಲ್ಲಿ ಸ್ವಲ್ಪ ಪ್ರಸಿದ್ಧಿಯನ್ನು ಪಡೆದ ಪರಿಮಳಭರಿತ ಹಾಗು ಮಕ್ಕಳಿಗೆ ಇಷ್ಟವಾಗುವ ಬೇಕರಿ ತಿಂಡಿ ಎಂದು ಹೇಳಬಹುದು. ಇದನ್ನು ಸುಲಭವಾಗಿ ಮನೆಯಲ್ಲಿ ಮಾಡುವ ವಿಧಾನವನ್ನು ತಿಳಿಸಿದ್ದೇನೆ, ಮಾಡಿ ಅಭಿಪ್ರಾಯ ತಿಳಿಸಿ.

ಮೊದಲು ಬೆಣ್ಣೆ, ಹಾಲು, ಎಸೆನ್ಸ್  ಮತ್ತು ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ತಿಕ್ಕಿ ಪೇಸ್ಟ್ ಮಾಡಿಕೊಳ್ಳಿ.
ನಂತರ ಅದಕ್ಕೆ ಮೈದಾಹಿಟ್ಟು, ಬೇಕಿಂಗ್ ಪೌಡರ್,ಏಲಕ್ಕಿ ಪುಡಿ, ಟುಟಿ ಫ್ರುಟಿ,ಉಪ್ಪು  ಹಾಗು ಕಸ್ಟರ್ಡ್ ಪುಡಿ ಸೇರಿಸಿ, ಚೆನ್ನಾಗಿ ಹೊಂದಿಸಿ.ಹಿಟ್ಟನ್ನು ಮಸೆಯಬೇಡಿ ಸುಮ್ಮನೆ ಹೊಂದಿಸಿ.
ನಂತರ ಅದನ್ನು ಸಿಲೆಂಡರ್ ಆಕಾರದಲ್ಲಿ  ರೋಲ್ ತರಹ ಮಾಡಿ, ಬಟರ್ ಪೇಪರ್ ನಲ್ಲಿ  ಸುತ್ತಿ ಅರ್ಧಗಂಟೆಗಳ ಕಾಲ ಫ್ರಿಜ್ ನಲ್ಲಿ
 ಇಡಿ.
ನಂತರ ಅದನ್ನು ಅರ್ಧ ಇಂಚಿನ ಅಂತರದಲ್ಲಿ ಕಟ್ ಮಾಡಿ ಬೇಕಿಂಗ್ ಟ್ರೇಯ ಮೇಲೆ ಸ್ವಲ್ಪ ಅಂತರದಲ್ಲಿ ಇಡಿ.
ಓವೆನ್ ಅನ್ನು ೧೮೦ ಡಿಗ್ರೀ ಯಲ್ಲಿ ಪ್ರಿ ಹೀಟ್ ಮಾಡಿ. ಈಗ ಬೇಕಿಂಗ್ ಟ್ರೇಯನ್ನು ಮೊದಲೇ ಬಿಸಿ ಮಾಡಿದ ಓವೆನ್ ನಲ್ಲಿಡಿ.
ಈಗ ೧೮೦ ಡಿಗ್ರೀ ಯಲ್ಲಿ ೨೦ - ೨೫  ನಿಮಿಷ ಬೆಕ್ ಮಾಡಿ.

comments powered by Disqus