Manjushree's Kairuchi
Untitled Document

ಸಾಮೆ ಅಕ್ಕಿ ಕೇಸರಿಬಾತ್

Image
  • ಶೈಲಿ : ಉತ್ತರ ಕನ್ನಡ
  • ಸರ್ವ್ :4
  • ಸಮಯ :೧ ಗಂಟೆ

ಬೇಕಾಗುವ ಸಾಮಗ್ರಿಗಳು

  • ಸಾಮೆ ಅಕ್ಕಿ ೧ ಕಪ್
  • ಸಕ್ಕರೆ ೧.೧/೨ ಕಪ್
  • ತುಪ್ಪ ೧/೨ ಕಪ್
  • ಏಲಕ್ಕಿ ಪುಡಿ
  • ಗೋಡಂಬಿ ೧೦
  • ದ್ರಾಕ್ಷಿ ೨೦
  • ಕೇಸರಿ ದಳಗಳು ೧೫
  • ಬಿಸಿ ಹಾಲು ೨ ದೊಡ್ಡ ಚ
  • ಲಿಂಬೆರಸ ೧ ಟೀ ಚ
  • ಉಪ್ಪು ಚಿಟಿಕೆ

ಮಾಡುವ ವಿಧಾನ

ಅನ್ನದ ಕೇಸರಿಬಾತ್ ಉತ್ತರ ಕನ್ನಡ ದ ವಿಶಿಷ್ಟವಾದ ಸಿಹಿ ತಿಂಡಿ, ಮಾಡುವೆ ಮುಂಜಿಗಳಲ್ಲಿ ಇದನ್ನು ಮಾಡಿದರೆ ಅದೊಂದು ದೊಡ್ಡ ಸಿರಿವಂತಿಕೆ ಅಲ್ಲೆಲ್ಲ :). ತುಪ್ಪ, ಗೋಡಂಬಿ ಮತ್ತು ಕೇಸರಿ ದಳಗಳು ಈ ಸಿಹಿಗೆ ವಿಶಿಷ್ಟ ಸಿರಿವಂತಿಕೆ ಕೊಟ್ಟಿದೆ ಎಂದು ಹೇಳಬಹುದು. ತುಂಬಾ ರುಚಿ, ಪರಿಮಳ ಹಾಗು ಒಂದು ವಾರಗಳ ಕಾಲ ಇಟ್ಟು ತಿನ್ನಬಹುದಾದ ಸಿಹಿ ಇದು. ಸಾಮಾನ್ಯವಾಗಿ ಇದನ್ನು ಸಣ್ಣಕ್ಕಿ ಅಥವಾ ಜೀರಿಗೆ ಸಾಂಬಾರ್ ರೈಸ್ ಅಥವಾ ಜೀರಾ ಅಕ್ಕಿಯಲ್ಲಿ ಮಾಡುತ್ತಾರೆ,  ಈಗ ಸಿರಿದಾನ್ಯಗಳು ಸ್ವಲ್ಪ ಜಾಸ್ತಿಯೇ ಪ್ರಚಲಿತದಲ್ಲಿ ಇರುವದರಿಂದ ಅದರಲ್ಲಿ ಒಂದು ಅಕ್ಕಿ ಉಪಯೋಗಿಸಿ ಈ ಸಿಹಿ ಮಾಡಿದ್ದೇನೆ, ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳನ್ನು ತಿಳಿಸಿದ್ದೇನೆ, ಮಾಡಿ ಅಭಿಪ್ರಾಯ ತಿಳಿಸಿ. 

ಅಕ್ಕಿಯನ್ನು ಚೆನ್ನಾಗಿ ತೊಳೆದು ಅಕ್ಕಿಯ ಎರಡರಷ್ಟು ನೀರನ್ನು ಹಾಕಿ ಚೆನ್ನಾಗಿ ಬೇಯಿಸಿ ಇಟ್ಟುಕೊಳ್ಳಿ.
ಕೇಸರಿದಳಗಳನ್ನು ಬಿಸಿ ಹಾಲಿಗೆ ಹಾಕಿ ೧೦ ನಿಮಿಷ ಹಾಗೆ ಇಡಿ.
ಒಂದು ಬಾಣಲೆಯಲ್ಲಿ ಬೆಂದ ಅಕ್ಕಿ, ಕೇಸರಿ ಹಾಲು, ಸಕ್ಕರೆ ಹಾಕಿ ಮಗುಚುತ್ತಾ ಇರಿ.
ಸಕ್ಕರೆ ಕರಗಿದ ಮೇಲೆ ಮದ್ಯೆ ಮದ್ಯೆ ತುಪ್ಪ ಹಾಕಿ ಹಾಕಿ ಮಗಚಿ. 
ಈಗ ಗೋಡಂಬಿ, ದ್ರಾಕ್ಷಿ, ಉಪ್ಪು ಹಾಕಿ ತುಪ್ಪ ಬಿಟ್ಟುಕೊಳ್ಳಲು ಪ್ರಾರಂಭವಾಗುವ ವರೆಗೆ ಮಗುಚಿ.
ಕೊನೆಯಲ್ಲಿ ಒಲೆಯನ್ನು ಆರಿಸಿ, ಲಿಂಬೆರಸ ಸೇರಿಸಿ ಚೆನ್ನಾಗಿ ಹೊಂದಿಸಿ. 

comments powered by Disqus