Manjushree's Kairuchi
Untitled Document

ಮೊಟ್ಟೆರಹಿತ ಚಾಕಲೇಟ್ ಮಾವಿನಹಣ್ಣಿನ ಕಪ್ ಕೇಕ್

Image
  • ಶೈಲಿ :ಕಾಂಟಿನೆಂಟಲ್
  • ಸರ್ವ್ :8
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಮೈದಾಹಿಟ್ಟು ೨ ಕಪ್
  • ಸಕ್ಕರೆ ೧/೨ ಕಪ್
  • ಬೆಣ್ಣೆ ೧/೪ ಕಪ್
  • ಕೋಕೋ ಪುಡಿ ೨ ದೊಡ್ಡ ಚ
  • ತಾಜಾ ಮಾವಿನ ಹಣ್ಣಿನ ರಸ ಅಥವಾ ಮಾವಿನ ಹಣ್ಣಿನ ಜ್ಯೂಸು ೧.೧/೪ ಕಪ್
  • ವೆನಿಲ್ಲಾ ಎಸೆನ್ಸ್ ೧ ಟೀ ಚ ಬೇಕಿಂಗ್ ಪುಡಿ ೧ ಟೀ ಚ ಬೇಕಿಂಗ್ ಸೋಡಾ ೧/೪ ಟೀ ಚ ಲಿಂಬುರಸ ೧ ಟೀ ಚ

ಮಾಡುವ ವಿಧಾನ

"ಮೊಟ್ಟೆರಹಿತ ಚಾಕಲೇಟ್ ಮಾವಿನಹಣ್ಣಿನ ಕಪ್ ಕೇಕ್" ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ. 

ಓವೆನ್ ಅನ್ನು ಪ್ರಿ ಹೀಟ್  ಮಾಡಿ 180°C/ 350 °F/.
ಒಂದು ಪಾತ್ರೆಯಲ್ಲಿ ಸಕ್ಕರೆ, ಕರಗಿಸಿದ ಬೆಣ್ಣೆ, ಮಾವಿನಹಣ್ಣಿನ ರಸ ಮತ್ತು ವೆನಿಲ್ಲಾ ಎಸೆನ್ಸ್  ಸೇರಿಸಿ, ಸಕ್ಕರೆ ಕರಗುವವರೆಗೆ ಚೆನ್ನಾಗಿ ಹೊಂದಿಸಿ. 
ಇನ್ನೊಂದು ಪಾತ್ರೆಯಲ್ಲಿ ಮೈದಾಹಿಟ್ಟು, ಕೋಕೋ ಪುಡಿ, ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪುಡಿಯನ್ನು ಜರಡಿ ಹಿಡಿದು ಇಟ್ಟುಕೊಳ್ಳಿ.
ಈಗ ಕರಗಿಸಿದ ಮಿಶ್ರಣವನ್ನು ಮೈದಾಹಿಟ್ಟಿಗೆ ಸೇರಿಸಿ ಗಂಟಿಲ್ಲದಂತೆ ಹೊಂದಿಸಿ.
ಕೊನೆಯಲ್ಲಿ ಲಿಂಬೆರಸ ಸೇರಿಸಿ ಮತ್ತೆ ಹೊಂದಿಸಿ, ಹಿಟ್ಟನ್ನು ಕಪ್ ಕೇಕ್ ಮೌಲ್ಡ್ ಗೆ ಹಾಕಿ ಮೊದಲೇ ಬಿಸಿ ಮಾಡಿದ  ಓವೆನ್ನಲ್ಲಿ 20 ರಿಂದ 25 ನಿಮಿಷ  ಬೆಕ್ ಮಾಡಿ.
ನಂತರ ಒಂದು ಚೂರಿ ಅಥವಾ ಕಡ್ಡಿ ಯನ್ನು ಅದರ ಮೇಲೆ ಚುಚ್ಚಿ ಅದಕ್ಕೆ ಅಂಟದಿದ್ದರೆ ಕೇಕ್ ಬೆಂದಿದೆ ಎಂದು ಬೆಂಕಿ ಆರಿಸಿ ತಣಿಯಲು ಬಿಡಿ. ಪ್ರೆಷರ್ ಕುಕ್ಕರ್ ನಲ್ಲಿ ಮಾಡುವದಾದರೆ ಮೊದಲು ಕುಕ್ಕರ್ ನ ಬಿಸಿಮಾಡಿ, ನಂತರ ಒಂದು ಖಾಲಿ ಪಾತ್ರೆ ಇಟ್ಟು ಅದರ ಮೇಲೆ ಕೇಕ್ ಹಿಟ್ಟನ್ನು ಇಟ್ಟು, ಮುಚ್ಚಿ, ಮದ್ಯಮ ಉರಿಯಲ್ಲಿ ೪೦ ರಿಂದ ೪೫ ನಿಮಿಷ ಬೇಯಿಸಿ.(ಕುಕ್ಕರ್ ನ ವಿಷೆಲ್ ಹಾಗು ಗ್ಯಾಸ್ಕೆಟ್ ಹಾಕಬಾರದು ಹಾಗೆಯೇ ಮುಚ್ಚಳ ಮುಚ್ಚಿ ಬೇಯಿಸಿ).

comments powered by Disqus