Manjushree's Kairuchi
Untitled Document

ಸೋಯಾ ಬುರ್ಜಿ

Image
  • ಶೈಲಿ :ಉತ್ತರ ಭಾರತ
  • ಸರ್ವ್ :4
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಸೋಯಾ ಗ್ರಾನುಯಲ್ಸ್ ೧ ಕಪ್
  • ಈರುಳ್ಳಿ ೧
  • ಕ್ಯಾಪ್ಸಿಕಂ ೧/೨
  • ಟೊಮೇಟೊ ೨
  • ಹಸಿ ಬಟಾಣಿ ೧/೨ ಕಪ್
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ೧ ದೊಡ್ಡ ಚ
  • ಗರಂ ಮಸಾಲೆ ಪುಡಿ ೧ ಟೀ ಚ
  • ಕೊತ್ತೊಂಬರಿ ಪುಡಿ ೧ ಟೀ ಚ
  • ಜೀರಿಗೆ ಪುಡಿ ೧ ಟೀ ಚ
  • ಕೆಂಪು ಮೆಣಸಿನಪುಡಿ ೧ ಟೀ ಚ
  • ಎಣ್ಣೆ ೧ ಟೀ ಚ
  • ಸೋಂಪು ೧ ಟೀ ಚ
  • ಕಸೂರಿ ಮೇಥಿ ೧/೪ ಟೀ ಚ
  • ಅರಿಶಿನ ಚಿಟಿಕೆ
  • ಇಂಗು ಚಿಟಿಕೆ
  • ಕೊತ್ತೊಂಬರಿ ಸೊಪ್ಪು ಅಲಂಕಾರಕ್ಕೆ
  • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಸೋಯಾ ಬುರ್ಜಿ ಇದನ್ನು ಸೋಯಾ ಗ್ರಾನುಯಲ್ಸ್ ಎಂದು ಸಿಗುತ್ತದೆ ಅದರಿಂದ ಮಾಡಿದ್ದು, ಸೋಯಾಬೀನ್ ಇಂದ ತಯಾರಿಸುವ ಈ ಪದಾರ್ಥ ಸೋಯಾ ಚಂಕ್ಸ್ ಹಾಗೆ ತುಂಬಾ ಸಣ್ಣ ಸಣ್ಣ ಹರಳುಗಳಿಂದ ಕೂಡಿರುತ್ತದೆ, ಸೋಯಾ ಚಂಕ್ಸ್ ದೊಡ್ಡದಾಗಿರುತ್ತದೆ ಸೋಯಾ ಗ್ರಾನುಯಲ್ಸ್ ಸಣ್ಣ ದಾಗಿ ಇದ್ದು ಎರಡರಲ್ಲಿ ಒಂದೇ ಆರೋಗ್ಯಕರ ಅಂಶವನ್ನು ಹೊಂದಿರುತ್ತದೆ. ಸೋಯಾಬೀನ್ ಇದು ಸಸ್ಯಾಹಾರಿಗಳಿಗೆ ಒಂದು ವರದಾನ ಎಂದೇ ಹೇಳಬಹುದು,ಅತ್ಯಧಿಕ ಮಟ್ಟದಲ್ಲಿ ಪ್ರೊಟೀನ್ ಮತ್ತು ನಾರಿನಂಶವನ್ನು ಹೊಂದಿದೆ, ಇದನ್ನು ದಿನನಿತ್ಯದ ಆಹಾರದಲ್ಲಿ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಹೇಳುತ್ತಾರೆ. ಸೋಯಾ ಚಂಕ್ಸ್ ಸ್ವಲ್ಪ ದೊಡ್ಡದಾಗಿದ್ದು ಎಲ್ಲರಿಗು ತಿನ್ನಲು ಇಷ್ಟವಾಗುವದಿಲ್ಲ ಅಂತವರು ಸೋಯಾವನ್ನು ಗ್ರಾನುಯಲ್ಸ್ ರೂಪದಲ್ಲಿ ತಿನ್ನಬಹುದು. ಈ ಗ್ರಾನುಯಲ್ಸ್ ಉಪಯೋಗಿಸಿ ರುಚಿಕರ ಅಡುಗೆಯನ್ನು ತಯಾರಿಸಿದ್ದೇನೆ, ಮಾಡಲು ಸುಲಭ ಹಾಗು ಚಪಾತಿ ಜೊತೆಗೆ ತುಂಬಾ ರುಚಿಯಾಗಿಯೂ ಇರುತ್ತದೆ. ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳನ್ನು ವಿವರಿಸಿದ್ದೇನೆ, ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ಸೋಯಾ ಗ್ರಾನುಯಲ್ಸ್ ಗೆ ಕುದಿಯುತ್ತಿರುವ ನೀರನ್ನು ಹಾಕಿ ೫ ನಿಮಿಷ ಇಟ್ಟು, ಕೈಯಿಂದ ಹಿಂಡಿ ನೀರಿನಂಶವನ್ನು ತೆಗೆದು ಇಟ್ಟುಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಅದಕ್ಕೆ ಸೋಂಪು, ಅರಿಶಿನ, ಇಂಗು,ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ ಮತ್ತು ಹಸಿಬಟಾಣಿ ಸೇರಿಸಿ ಚೆನ್ನಾಗಿ ಹುರಿಯಿರಿ.
ನಂತರ ಅದಕ್ಕೆ ಗರಂ ಮಸಾಲೆ ಪುಡಿ, ಉಪ್ಪು, ಕೊತ್ತೊಂಬರಿ ಪುಡಿ, ಕೆಂಪು ಮೆಣಸಿನಪುಡಿ, ಜೀರಿಗೆ ಪುಡಿ,ಕಸೂರಿ ಮೇಥಿ ಸೇರಿಸಿ ಚೆನ್ನಾಗಿ ಹೊಂದಿಸಿ.
ಈಗ ಅದಕ್ಕೆ ಹಿಂಡಿ ಇಟ್ಟುಕೊಂಡ ಸೋಯಾ ಗ್ರಾನುಯಲ್ಸ್ ಮತ್ತು ಕೊತ್ತೊಂಬರಿ ಸೊಪ್ಪು ಸೇರಿಸಿ ಹೊಂದಿಸಿ. 

 

comments powered by Disqus