Manjushree's Kairuchi
Untitled Document

ಚಟ್ನಿವಾಲಾ ಅವಲಕ್ಕಿ

Image
  • ಶೈಲಿ :ಭಾರತ
  • ಸರ್ವ್ :4
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ದಪ್ಪ ಅವಲಕ್ಕಿ ೧ ಕಪ್
  • ಹೆಚ್ಚಿದ ಕ್ಯಾರಟ್ ೧/೪ ಕಪ್
  • ಹೆಚ್ಚಿದ ಈರುಳ್ಳಿ ೧/೪ ಕಪ್
  • ಹೆಚ್ಚಿದ ಕ್ಯಾಪ್ಸಿಕಂ ೧/೪ ಕಪ್
  • ಹೆಚ್ಚಿದ ಟೊಮೇಟೊ ೧/೪ ಕಪ್
  • ಹೆಚ್ಚಿದ ಬೀನ್ಸ್ ೧/೪ ಕಪ್
  • ಹಸಿ ಬಟಾಣಿ ೧/೪ ಕಪ್
  • ತೆಂಗಿನತುರಿ ೧/೪ ಕಪ್
  • ಹೆಚ್ಚಿದ ಶುಂಟಿ ೧ ಟೀ ಚ
  • ಹೆಚ್ಚಿದ ಬೆಳ್ಳುಳ್ಳಿ ೧ ಟೇ ಚ
  • ಹೆಚ್ಚಿದ ಆಲೂಗಡ್ಡೆ ೧/೪ ಕಪ್
  • ಗರಂ ಮಸಾಲಾ ೧ ಟೀ ಚ
  • ಎಣ್ಣೆ ೨ ಟೇ ಚ
  • ಉಪ್ಪು ರುಚಿಗೆ
  • ಕೊತ್ತೊಂಬರಿ ಸೊಪ್ಪು
  • ಹಸಿರು ಚಟ್ನಿ ೨ ದೊಡ್ಡ ಚ

ಮಾಡುವ ವಿಧಾನ

ಸಾಮಾನ್ಯವಾಗಿ ಅವಲಕ್ಕಿ ಯಲ್ಲಿ, ಒಗ್ಗರಣೆ ಅವಲಕ್ಕಿ, ಗೊಜ್ಜವಲಕ್ಕಿ, ಚುಡವಾ  ಎಂದೆಲ್ಲ ವಿಧ ವಿಧ ಭಕ್ಷ್ಯ ಗಳನ್ನು ಸಂಜೆಯು ಉಪಹಾರವಾಗಿ ತಯಾರಿಸುತ್ತಾರೆ, ಹಾಗೆ ಯಾವಗಲು ಅದನ್ನೇ ಮಾಡಲು ಹಾಗು ತಿನ್ನಲು ಬೇಸರವಾದವರಿಗೆ ಇದೊಂದು ಹೊಸ ರುಚಿ, ಉತ್ತರ ಭಾರತದ ಚಟ್ ಪಟಾ  ಶೈಲಿಯಲ್ಲಿ ಮಾಡಿದ ಈ ಅವಲಕ್ಕಿ ತುಂಬಾ ರುಚಿಯಾಗಿಯೂ ಹಾಗು ಸುಲಭದಲ್ಲಿ ಮಾಡಬಹುದಾದ  ತಿಂಡಿ ಆಗಿದೆ. ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಕೂಡ, ಇಂತಹ  ಎಲ್ಲರಿಗೂ ಇಷ್ಟವಾಗುವ  ರುಚಿಕರ ಈ ಅವಲಕ್ಕಿಯನ್ನು  ಮಾಡುವ ವಿಧಾನ ಹಾಗು ಬೇಕಾಗುವ ಸಾಮಗ್ರಿಗಳನ್ನು ವಿವರಿಸಲಾಗಿದೆ ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ಅವಲಕ್ಕಿಯನ್ನು ತೊಳೆದು, ಮುಚ್ಚಳ ಮುಚ್ಚಿ ೨೦ ನಿಮಿಷ ಹಾಗೆಯೇ ಬಿಡಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿದ ಶುಂಟಿ ಬೆಳ್ಳುಳ್ಳಿ ಹಾಕಿ ಹುರಿದು, ಈರುಳ್ಳಿ ಹಾಕಿ ಬಾಡಿಸಿ.
ನಂತರ ಅದಕ್ಕೆ ಕ್ಯಾರಟ್, ಬೀನ್ಸ್, ಬಟಾಣಿ, ಆಲೂಗಡ್ಡೆ ಹಾಗು ಕ್ಯಾಪ್ಸಿಕಂ ಹಾಕಿ ಚಿಟಿಕೆ ಉಪ್ಪು ಹಾಕಿ ತರಕಾರಿ ಬೇಯುವವರೆಗೆ ಹುರಿಯಿರಿ.
ತರಕಾರಿಗಳು ಬೆಂದ ನಂತರ ಅದಕ್ಕೆ ಟೊಮೇಟೊ ಹಾಕಿ ಬಾಡಿಸಿ.
ಟೊಮೇಟೊ ಹಾಗು ಎಲ್ಲ ತರಕಾರಿಗಳು ಬೆಂದ ನಂತರ ಅದಕ್ಕೆ ಹಸಿರು ಚಟ್ನಿ, ಗರಂ ಮಸಾಲಾ, ಉಪ್ಪು, ಹಾಕಿ ತೊಳೆಸಿ.
ನಂತರ ಅದಕ್ಕೆ ಕೊತ್ತೊಂಬರಿ ಸೊಪ್ಪು, ತೊಳೆದ ಅವಲಕ್ಕಿ ಹಾಕಿ ಚೆನ್ನಾಗಿ ಹೊಂದಿಸಿ.
ಕೊನೆಯಲ್ಲಿ ತೆಂಗಿನತುರಿ ಸೇರಿಸಿ ಬಿಸಿ ಬಿಸಿ ಸರ್ವ್ ಮಾಡಿ.

comments powered by Disqus