Manjushree's Kairuchi
Untitled Document

ಕೆಸುವಿನ ಗಡ್ಡೆ ಮಸಾಲೆ ಪಲ್ಯ

Image
  • ಶೈಲಿ :ಉತ್ತರ ಭಾರತ
  • ಸರ್ವ್ :4
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಕೆಸುವಿನ ಗಡ್ಡೆ ೧೫-೨೦
  • ಈರುಳ್ಳಿ ೧
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ೧ ದೊಡ್ಡ ಚ
  • ಗರಂ ಮಸಾಲೆ ಪುಡಿ ೧ ಟೀ ಚ
  • ಕೆಂಪು ಮೆಣಸಿನ ಪುಡಿ ೧ ಟೀ ಚ
  • ಜೀರಿಗೆ ಪುಡಿ ೧ ಟೀ ಚ
  • ಕೊತ್ತೊಂಬರಿ ಪುಡಿ ೧ ಟೀ ಚ
  • ಗಟ್ಟಿ ಮೊಸರು ೧/೪ ಕಪ್
  • ಜೀರಿಗೆ ೧/೨ ಟೀ ಚ
  • ಇಂಗು ಚಿಟಿಕೆ
  • ಉಪ್ಪು ರುಚಿಗೆ ತಕ್ಕಷ್ಟು
  • ಅರಿಶಿನ ಚಿಟಿಕೆ
  • ಕೊತ್ತೊಂಬರಿ ಸೊಪ್ಪು ಸ್ವಲ್ಪ
  • ಕರಿಯಲು ಎಣ್ಣೆ
  • ಒಗ್ಗರಣೆಗೆ ಎಣ್ಣೆ ೧ ಟೀ ಚ

ಮಾಡುವ ವಿಧಾನ

ಕೆಸುವಿನ ಗಡ್ಡೆ ಬೇಯಿಸಿದ ಮೇಲೆ ಸ್ವಲ್ಪ ನೊಳೆ ಅನ್ನಿಸುತ್ತದೆ ಅದು ಎಲ್ಲರಿಗು ಇಷ್ಟವಾಗುವದಿಲ್ಲ,ಅದನ್ನು ಈ ರೀತಿ ಮಾಡಿದರೆ ಪಲ್ಯ ಉದುರಾಗಿಯೂ ತಿನ್ನಲು ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ವಿವರಿಸಿದ್ದೇನೆ, ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. 

ಮೊದಲು ಕೆಸುವಿನ ಗಡ್ಡೆಯ ಸಿಪ್ಪೆ ತೆಗೆದು, ಚೆನ್ನಾಗಿ ತೊಳೆದು, ಒಣಗಿದ ಬಟ್ಟೆಯ ಮೇಲೆ ಹರವಿ ಇಟ್ಟುಕೊಳ್ಳಿ.
ನಂತರ ಅದಕ್ಕೆ ಸ್ವಲ್ಪ ಉಪ್ಪು ಹಾಕಿ  ಹೊಂದಿಸಿ ಹತ್ತು ನಿಮಿಷ ಹಾಗೆಯೇ ಬಿಡಿ. ಈಗ ಅದನ್ನು ಚೆನ್ನಾಗಿ ತೊಳೆದು ಒಣಗಿದಬಟ್ಟೆಯ ಮೇಲೆ  ಹಾಕಿ.
ನಂತರ ಅದನ್ನು ಗೋಲಾಕಾರವಾಗಿ ತೆಳುವಾಗಿ ಕತ್ತರಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಬರುವವರೆಗೆ ಕರಿದು ಇಟ್ಟುಕೊಳ್ಳಿ.
ಈಗ ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಜೀರಿಗೆ, ಇಂಗು, ಅರಿಶಿನ, ಹೆಚ್ಚಿದ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಬಾಡಿಸಿ.
ನಂತರ ಅದಕ್ಕೆ ಗರಂ ಮಸಾಲೆ, ಕೆಂಪು ಮೆಣಸಿನಪುಡಿ, ಜೀರಿಗೆ ಪುಡಿ, ಕೊತ್ತೊಂಬರಿಪುಡಿ, ಉಪ್ಪು ಮತ್ತು ಗಟ್ಟಿ ಮೊಸರು ಸೇರಿಸಿ ಕುದಿಸಿ, ಕರಿದ ಕೆಸುವಿನ ಗಡ್ಡೆಯ ಚೂರುಗಳನ್ನು ಸೇರಿಸಿ ಚೆನ್ನಾಗಿ ಬಾಡಿಸಿ.
ಪಲ್ಯದ ನೀರಿನಂಶವೆಲ್ಲ ಹೋಗಿ ಸ್ವಲ್ಪ ಎಣ್ಣೆ ಮೇಲೆ ಬರಲು ಪ್ರಾರಂಭವಾದ ಮೇಲೆ ಅದಕ್ಕೆ ಕೊತ್ತೊಂಬರಿ ಸೊಪ್ಪು ಸೇರಿಸಿ ಹೊಂದಿಸಿ. 

comments powered by Disqus