Manjushree's Kairuchi
Untitled Document

ಗುರೆಳ್ಳು ಚಟ್ನೆಪುಡಿ

Image
  • ಶೈಲಿ :ಉತ್ತರ ಕರ್ನಾಟಕ
  • ಸರ್ವ್ :4
  • ಸಮಯ :೩೦ ನಿಮಿಷ

ಬೇಕಾಗುವ ಸಾಮಗ್ರಿಗಳು

  • ಗುರೆಳ್ಳು ೧ ಕಪ್
  • ಬೆಳ್ಳುಳ್ಳಿ ೧ ಗಡ್ಡೆ
  • ಬ್ಯಾಡಗಿ ಒಣಮೆಣಸು ೧೦
  • ಉಪ್ಪು ರುಚಿಗೆ ತಕ್ಕಷ್ಟು
  • ಹುಣಸೆಹಣ್ಣು ಸಣ್ಣ ನೆಲ್ಲಿಕಾಯಿ ಗಾತ್ರದ್ದು

ಮಾಡುವ ವಿಧಾನ

ಗುರೆಳ್ಳು ಅಥವಾ ಉಚ್ಚೆಳ್ಳು ತುಂಬಾ ಪರಿಮಳಭರಿತ ಹಾಗು ರುಚಿಕರವಾದ ಎಣ್ಣೆ ಬೀಜ, ಈ ಬೀಜಗಳು ಉತ್ತರ ಕರ್ನಾಟಕದ ಜನರು ಹೇರಳವಾಗಿ ಉಪಯೋಗಿಸುತ್ತಾರೆ. ಆರೋಗ್ಯಕ್ಕೆ ಒಳ್ಳೆಯದಾಗಿರುವ ಇದನ್ನು ಚಳಿಗಾಲದಲ್ಲಿ ಹೇರಳವಾಗಿ ಉಪಯೋಗಿಸಬೇಕು. ಸಾಮಾನ್ಯವಾಗಿ ಉತ್ತರ ಕರ್ನಾಟಕ ಅಥವಾ ಬಯಲುಸೀಮೆಯ ಕಡೆ ಜೋಳದ ರೊಟ್ಟಿಯ ಜೊತೆಗೆ ಇದನ್ನು ಕೊಟ್ಟೆ ಕೊಡುತ್ತಾರೆ. ಇದರ ಚಟ್ನೆಪುಡಿ ಮಾಡುವ ಬಗೆಯನ್ನು ವಿವರಿಸಿದ್ದೇನೆ, ನೀವೂ ಮಾಡಿ ಅಭಿಪ್ರಾಯ ತಿಳಿಸಿ. 

ಒಂದು ಬಾಣಲೆಯಲ್ಲಿ ಗುರೆಳ್ಳು, ಬೆಳ್ಳುಳ್ಳಿ, ಬ್ಯಾಡಗಿಮೆಣಸು ಮತ್ತು ಹುಣಸೆಹಣ್ಣು ಹುರಿದು, ತಣಿಯಲು ಬಿಡಿ.
ನಂತರ ಅದಕ್ಕೆ ಉಪ್ಪು ಸೇರಿಸಿ  ನುಣ್ಣಗೆ ಪುಡಿಮಾಡಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿ ಇಡಿ.
ಇದನ್ನು ಚಟ್ನಿ ಪುಡಿಯಾಗಿಯೂ, ಪಲ್ಯಕ್ಕೆ ಸಾಂಬಾರಿಗೆ ಮೇಲಿನಿಂದ ಹಾಕಿದರೂ ತುಂಬಾಚೆನ್ನಾಗಿ ಇರುತ್ತದೆ. 

 

comments powered by Disqus