Manjushree's Kairuchi
Untitled Document

ಹರಿಯಾಲಿ ಅಣಬೆ

Image
  • ಶೈಲಿ :ಉತ್ತರ ಭಾರತ
  • ಸರ್ವ್ :4
  • ಸಮಯ :1ಗಂಟೆ

ಬೇಕಾಗುವ ಸಾಮಗ್ರಿಗಳು

  • ಅಣಬೆ ೧೦-೧೨
  • ಈರುಳ್ಳಿ ೧
  • ಪಾಲಕ್ ಸೊಪ್ಪು ೧ ಕಟ್ಟು
  • ಹಸಿರು ಟೊಮೇಟೊ ೨
  • ಹಸಿಮೆಣಸು ೨-೩
  • ಶುಂಠಿ ೧ ಇಂಚು
  • ಬೆಳ್ಳುಳ್ಳಿ ೬-೮ ಎಸಳುಗಳು
  • ಕ್ಯಾಪ್ಸಿಕಂ ೧
  • ಗೋಡಂಬಿ ೨ ದೊಡ್ಡ ಚ
  • ಕೊತ್ತೊಂಬರಿ ಪುಡಿ ೧ ದೊಡ್ಡ ಚ
  • ಜೀರಿಗೆ ಪುಡಿ ೧ ಟೀ ಚ
  • ಗರಂ ಮಸಾಲೆ ೧ ಟೀ ಚ
  • ಅರಿಶಿನ ಚಿಟಿಕೆ
  • ಚಾಟ್ ಮಸಾಲಾ ಚಿಟಿಕೆ
  • ತಾಜಾ ಹಾಲಿನ ಕೆನೆ ೧/೨ ಕಪ್
  • ಉಪ್ಪು ರುಚಿಗೆ ತಕ್ಕಷ್ಟು
  • ಕೊತ್ತೊಂಬರಿ ಸೊಪ್ಪು
  • ಕಸೂರಿ ಮೇಥಿ ೧ ಟೀ ಚ
  • ಬೆಣ್ಣೆ ೨ ದೊಡ್ಡ ಚ

ಮಾಡುವ ವಿಧಾನ

ಅಣಬೆಯನ್ನು ಪಕ್ಕಾ ಸಸ್ಯಾಹಾರಿಗಳು ತಿನ್ನಲು ಬಯಸುವದಿಲ್ಲ, ಮೊದಲೆಲ್ಲ ಅಣಬೆ ಕೊಳಚೆ ಪ್ರದೇಶದಲ್ಲಿ ಗೊಬ್ಬರದ ಮೇಲೆ ಬೆಳೆಯುವದು ನೋಡಿರುತ್ತೇವೆ ಅದಕ್ಕೋಸ್ಕರ ಇರಬಹುದು ತಿನ್ನಲು ಹಿಂಜರಿಕೆ ಆದರೆ ಈಗ ಅಣಬೆ ಕೃಷಿಯನ್ನು ಮಾಡುತ್ತಾರೆ ಸ್ವಚ್ಛ ಪ್ರದೇಶದಲ್ಲಿ ಬೆಳೆಯುತ್ತಾರೆ. ಹಾಗೆಯೇ ಆಯುರ್ವೇದದ ಪ್ರಕಾರ ಕೆಲವೊಂದು ತರಕಾರಿಗಳು ದೇಹದಲ್ಲಿ ರಾಜಸಿಕ ಅಂಶವನ್ನು ಹೆಚ್ಚಿಸುತ್ತದೆ ಅದರಲ್ಲಿ ಈ ಅಣಬೆಯು ಒಂದೆಂಬ ಅಂಬೋಣ ಅದಕ್ಕೆ ಬ್ರಾಹ್ಮಣರು, ಲಿಂಗಾಯ್ತರು ಹಾಗೆ ಅಯ್ಯಂಗಾರರು ಇದನ್ನು ತಿನ್ನುವದಿಲ್ಲ. ಅಣಬೆ ತುಂಬಾ ಒಳ್ಳೆಯದೆಂದು ಹೇಳುತ್ತಾರೆ. ಹಾಲಿನ ನಂತರ ಅಧಿಕ ಹೆಚ್ಚು ಕ್ಯಾಲ್ಸಿಯಂ ಇರುವ ತರಕಾರಿ ಹಾಗು ಅಧಿಕ ವಿಟಮಿನ್ "ಡಿ", ಪ್ರೊಟೀನ್  ಕೂಡ ಹೊಂದಿದೆ ಈ ಅಣಬೆ. ಇಂತಹ ಆರೋಗ್ಯಕರ ತರಕಾರಿಯಿಂದ ಒಂದು ರುಚಿಕರ ಕರ್ರಿ, ಅಣಬೆ ತಿನ್ನದವರು ಪನೀರ್, ಆಲೂಗಡ್ಡೆ, ಹೂಕೋಸು, ಮರಿಜೋಳ (ಬೇಬಿ ಕಾರ್ನ್) ಹೀಗೆ ನಿಮಗೆ ಇಷ್ಟವಾದ ತರಕಾರಿಯನ್ನು ಉಪಯೋಗಿಸಿಕೊಳ್ಳ ಬಹುದು. 

ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಮಾಡಿ, ಅದಕ್ಕೆ ಚೆನ್ನಾಗಿ ತೊಳೆದ ಪಾಲಕ್  ಸೊಪ್ಪನ್ನು ಹಾಕಿ ತೆಗೆದು ಇಟ್ಟುಕೊಳ್ಳಿ.

ಈಗ ಒಂದು ಬಾಣಲೆಯಲ್ಲಿ ಹೆಚ್ಚಿದ ಟೊಮೇಟೊ, ಈರುಳ್ಳಿ, ಕ್ಯಾಪ್ಸಿಕಂ, ಶುಂಠಿ, ಬೆಳ್ಳುಳ್ಳಿ, ಗೋಡಂಬಿ ಹಾಗು ಹಸಿಮೆಣಸು ಸೇರಿಸಿ ಬೇಯಿಸಿ.
ಪಾಲಕ್ ಸೊಪ್ಪು ಮತ್ತು ಬೇಯಿಸಿ ಇಟ್ಟುಕೊಂಡ ಟೊಮೇಟೊ ವನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ೧ ಚಮಚ ಬೆಣ್ಣೆ ಬಿಸಿ ಮಾಡಿ ಅದಕ್ಕೆ ಕಸೂರಿ ಮೇಥಿ ಹಾಗು ಹೆಚ್ಚಿದ ಅಣಬೆಯನ್ನು ಸೇರಿಸಿ ಹುರಿದು ಅದಕ್ಕೆ ರುಬ್ಬಿಟ್ಟುಕೊಂಡ ಪೇಸ್ಟ್ , ಜೀರಿಗೆಪುಡಿ, ಕೊತ್ತೊಂಬರಿಪುಡಿ,ಗರಂ ಮಸಾಲಾ,ಚಾಟ್ ಮಸಾಲಾ, ಉಪ್ಪು ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಕುದಿಸಿ. 
ಕೊನೆಯಲ್ಲಿ  ತಾಜಾ ಹಾಲಿನಕೆನೆ, ಉಳಿದ ಬೆಣ್ಣೆ ಹಾಗು ಕೊತ್ತೊಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಹೊಂದಿಸಿ.
ಇದು ಚಪಾತಿ, ರೋಟಿ, ದೋಸೆಗೆ ನೆಂಚಿಕೊಳ್ಳಲು ತುಂಬಾ ಚೆನ್ನಾಗಿರುತ್ತದೆ. 

 

comments powered by Disqus