Manjushree's Kairuchi
Untitled Document

ಪಾವ್ ಭಾಜಿ ದೋಸೆ

Image
  • ಶೈಲಿ :ಮುಂಬೈ
  • ಸರ್ವ್ :4
  • ಸಮಯ :10-12 ಗಂಟೆಗಳು

ಬೇಕಾಗುವ ಸಾಮಗ್ರಿಗಳು

  • ದೋಸೆಗೆ :-
  • ದೋಸೆ ಅಕ್ಕಿ ೨ ಕಪ್
  • ಉದ್ದಿನಬೇಳೆ ೧ ಕಪ್
  • ಮೆಂತ್ಯ ಕಾಳು ೧ ಟೀಚ
  • ಅಕ್ಕಿಹಿಟ್ಟು ೪ ದೊಡ್ಡ ಚ
  • ಉಪ್ಪು ರುಚಿಗೆ ತಕ್ಕಷ್ಟು
  • ಸಕ್ಕರೆ ೧ ಟೀ ಚ
  • ಬೆಣ್ಣೆ ೪ ದೊಡ್ಡ ಚ
  • ಭಾಜಿಗೆ :-
  • ಬೇಯಿಸಿದ ಆಲೂಗಡ್ಡೆ ದೊಡ್ಡದ್ದು ೨-೩
  • ಈರುಳ್ಳಿ ೨
  • ಟೊಮೇಟೊ ೨
  • ಕ್ಯಾಪ್ಸಿಕಂ ೧
  • ಹಸಿಬಟಾಣಿ ೧/೪ ಕಪ್
  • ಉಪ್ಪು ರುಚಿಗೆ ತಕ್ಕಷ್ಟು
  • ಬೆಣ್ಣೆ ೨ ದೊಡ್ಡ ಚ
  • ಹಸಿಮೆಣಸು ೧
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ೧ ದೊಡ್ಡ ಚ
  • ಪಾವಿಭಾಜಿ ಪುಡಿ ೧ ದೊಡ್ಡ ಚ
  • ಕೊತ್ತೊಂಬರಿ ಸೊಪ್ಪು
  • ಲಿಂಬೆರಸ ೧ ಟೀ ಚ
  • ಟೊಮೇಟೊ ಸಾಸ್ ೧ ದೊಡ್ಡ ಚ

ಮಾಡುವ ವಿಧಾನ

ಮುಂಬೈ ರಸ್ತೆ ಬದಿಯ ಚಾಟ್ಸ್ ಹೇಳಿದರೆ ನಮ್ಮ ದೇಶದಲ್ಲಿಯೇ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ, ಆ ಚಾಟ್ಸ್ ನಲ್ಲಿ ಈ ಪಾವ್ ಭಾಜಿ ದೋಸೆ ಕೂಡ ಒಂದು, ಇದನ್ನು ಸಾಮಾನ್ಯವಾಗಿ, ದೋಸೆಯನ್ನು ಮಾಡಿ ಅದರ ಮೇಲೆಯೇ ಭಾಜಿಯನ್ನು ಮಾಡಿ ಸರ್ವ್ ಮಾಡುವದು ರೂಡಿ, ಆದರೆ ನಾನು ಭಾಜಿಯನ್ನು ಮಾಡಿಟ್ಟುಕೊಂಡು ಮತ್ತೆ ದೋಸೆಯ ಮೇಲೆ ಸವರಿ ಸರ್ವ್ ಮಾಡಿದ್ದೇನೆ. ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳನ್ನು ವಿವರಿಸಿದ್ದೇನೆ,ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ದೋಸೆ ಅಕ್ಕಿ, ಉದ್ದಿನಬೇಳೆ ಮತ್ತು ಮೆಂತ್ಯ ಕಾಳನ್ನು ತೊಳೆದು ೪-೫ ಗಂಟೆಗಳ ಕಾಲ ನೆನೆಸಿ.
ನಂತರ ನುಣ್ಣಗೆ ರುಬ್ಬಿ ಅದಕ್ಕೆ ಉಪ್ಪು ಸೇರಿಸಿ ರಾತ್ರಿಯಿಡಿ ಬಿಡಿ ಅಥವಾ ೭-೮ ಗಂಟೆಗಳ ಕಾಲ ಬಿಡಿ.
ಈಗ ಅದಕ್ಕೆ ಅಕ್ಕಿಹಿಟ್ಟು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಹೊಂದಿಸಿ ಇಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಹೆಚ್ಚಿದ ಟೊಮೇಟೊ ಮತ್ತು ಈರುಳ್ಳಿ ಸೇರಿಸಿ ಬಾಡಿಸಿ.
ಈಗ ಅದಕ್ಕೆ ಹೆಚ್ಚಿದ ಕ್ಯಾಪ್ಸಿಕಂ ಮತ್ತು ಹಸಿಬಟಾಣಿ ಹಾಕಿ ಬೇಯುವವರೆಗೆ ಹುರಿಯಿರಿ.
ಕ್ಯಾಪ್ಸಿಕಂ ಮತ್ತು ಟೊಮೇಟೊ ಬೆಂದಮೇಲೆ ಅದಕ್ಕೆ ಪಾವಿಭಾಜಿ ಮಸಾಲಾ ಪುಡಿ, ಟೊಮೇಟೊ ಸಾಸ್
ಉಪ್ಪು, ಪುಡಿಮಾಡಿದ ಆಲೂಗಡ್ಡೆ ಮತ್ತು ಅರ್ಧ ಅಥವಾ ಮುಕ್ಕಾಲು ಕಪ್ ನೀರು ಸೇರಿಸಿ ಚೆನ್ನಾಗಿ ಹೊಂದಿಸಿ.
ಬಾಜಿ ಚೆನ್ನಾಗಿ ಕುದಿದ ಮೇಲೆ ಅದಕ್ಕೆ ಕೊತ್ತೊಂಬರಿಸೊಪ್ಪು ಸೇರಿಸಿ.
ದೋಸೆ ಕಾವಲಿಗೆಯನ್ನು ಬಿಸಿ ಮಾಡಿ ದೊಡ್ಡಕ್ಕೆ ದೋಸೆ ಹಾಕಿ,ಮೇಲೆ ಬೆಣ್ಣೆ ಸವರಿ, ಅದರ ಮೇಲೆ ಮಾಡಿಕೊಂಡ ಭಾಜಿ, ಸಣ್ಣಗೆ ಹೆಚ್ಚಿದ ಹಸಿ ಈರುಳ್ಳಿ, ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ಹನಿ ನಿಂಬೆರಸ ಹಾಕಿ ಮಡಚಿ, ಬಿಸಿ ಬಿಸಿ ಸರ್ವ್ ಮಾಡಿ. 

 

comments powered by Disqus