Manjushree's Kairuchi
Untitled Document

ಕರಮಣಿ ತೆಂಗಿನಕಾಯಿ ಕರ್ರಿ

Image
  • ಶೈಲಿ :ದಕ್ಷಿಣ ಭಾರತ
  • ಸರ್ವ್ :4
  • ಸಮಯ :30 ನಿಮಿಷ

ಬೇಕಾಗುವ ಸಾಮಗ್ರಿಗಳು

  • ನೆನೆಸಿದ ಕರಮಣಿ ಕಾಳು ೧ ಕಪ್
  • ಟೊಮೇಟೊ ೨
  • ಈರುಳ್ಳಿ ೧
  • ಹಸಿಮೆಣಸು ೧
  • ಬೆಳ್ಳುಳ್ಳಿ ಶುಂಠಿ ಪೇಸ್ಟ್ ೧ ಟೀ ಚ
  • ದಪ್ಪ ತೆಂಗಿನಕಾಯಿ ಹಾಲು ೧/೨ ಕಪ್
  • ಸಾರಿನಪುಡಿ ೧ ದೊಡ್ಡ ಚ
  • ಕರಿಬೇವು ಸ್ವಲ್ಪ
  • ಕೊತ್ತೊಂಬರಿ ಸೊಪ್ಪು ಸ್ವಲ್ಪ
  • ಉಪ್ಪು ರುಚಿಗೆ ತಕ್ಕಷ್ಟು
  • ಎಣ್ಣೆ ೧ ಟೀ ಚ

ಮಾಡುವ ವಿಧಾನ

ಕರಿಮಣಿ ಕಾಳು ಇದನ್ನು ಅಲಸಂದೆ ಕಾಳು ಅಂತಲೂ ಕರೆಯುತ್ತಾರೆ, ಇದನ್ನು ಉಪಯೋಗಿಸಿ ಒಂದು ರುಚಿಕರ ಮತ್ತು ಸುಲಭದಲ್ಲಿ ಮಾಡುವ ಕರ್ರಿ, ಇದನ್ನು ರೋಟಿ, ಚಪಾತಿ, ದೋಸೆ ಹಾಗೆಯೇ ಅನ್ನದಜೊತೆಗೂ ಕೂಡ ಸರ್ವ್ ಮಾಡಬಹುದು. ಮಾಡುವ ವಿಧಾನ ಮತ್ತು ಬೇಕಾಗುವಸಾಮಗ್ರಿಗಳನ್ನು ವಿವರಿಸಿದ್ದೇನೆ, ಮನೆಯಲ್ಲಿ ಮಾಡಿ ಅಭಿಪ್ರಾಯ ತಿಳಿಸಿ. 

ನೆನೆಸಿದ  ಕರಮಣಿ ಕಾಳುಗಳನ್ನು ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿ ಇಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಹೆಚ್ಚಿದ ಈರುಳ್ಳಿ ಮತ್ತು ಟೊಮೇಟೊ ಸೇರಿಸಿ ಚೆನ್ನಾಗಿ ಬಾಡಿಸಿ. 
ಈಗ ಅದಕ್ಕೆ ಉಪ್ಪು, ಸಾರಿನಪುಡಿ, ಕರಿಬೇವು, ಕೊತ್ತೊಂಬರಿಸೊಪ್ಪು ಹಾಗು ಬೇಯಿಸಿದ ಕಾಳನ್ನು ಸೇರಿಸಿ ಚೆನ್ನಾಗಿ ಹೊಂದಿಸಿ.
ಕೊನೆಯಲ್ಲಿ ತೆಂಗಿನಹಾಲನ್ನು ಸೇರಿಸಿ ಒಂದು ಕುದಿ ಕುದಿಸಿ.  
 

comments powered by Disqus