Manjushree's Kairuchi
Untitled Document

ಬಾದಾಮಿ ಮತ್ತು ಗೋಡಂಬಿ ಬರ್ಫಿ

Image
  • ಶೈಲಿ : ಸಿಹಿತಿಂಡಿ
  • ಸರ್ವ್ :10
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಬಾದಾಮಿ ೧/೨ ಕಪ್
  • ಗೋಡಂಬಿ ೧/೨ ಕಪ್
  • ತುಪ್ಪ ೨ದೊಡ್ಡಚಮಚ
  • ಚಿರೋಟಿ ರವಾ೧/೪ ಕಪ್
  • ಸಕ್ಕರೆ ೨ ಕಪ್
  • ಏಲಕ್ಕಿ ಮತ್ತು ಲವಂಗದಪುಡಿ ಚಿಟಿಕೆ
  • ಕೇಸರಿ ದಳಗಳು ೧೦
  • ಬಿಸಿ ಹಾಲು ೨ ದೊಡ್ಡಚಮಚ
  • ನೀರು ೧/೨ ಕಪ್

ಮಾಡುವ ವಿಧಾನ

"ಬಾದಾಮಿ ಮತ್ತು ಗೋಡಂಬಿ ಬರ್ಫಿ"

ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು, ಈ ವರ್ಷದ ಹಬ್ಬಕ್ಕೆ ಈ ಸಿಹಿತಿಂಡಿ ಮಾಡಿ ಮತ್ತು ಅಭಿಪ್ರಾಯ ತಿಳಿಸಿ.

ಮೊದಲು ಗೋಡಂಬಿ ಮತ್ತು ಬಾದಾಮಿಯನ್ನು ನುಣ್ಣಗೆ ಪುಡಿಮಾಡಿ ಇಟ್ಟುಕೊಳ್ಳಿ.
ರವಾವನ್ನು ಸ್ವಲ್ಪ ತುಪ್ಪದಲ್ಲಿ ಹೊಂಬಣ್ಣಕ್ಕೆ ಬರುವಂತೆ ಹುರಿದು ಇಟ್ಟುಕೊಳ್ಳಿ ಮತ್ತು ಹಾಲಿಗೆ ಕೇಸರಿ ದಳಗಳನ್ನು ಹಾಕಿ ಇಡಿ.

ಈಗ ದಪ್ಪ ತಳದ ಬಾಣಲೆಯಲ್ಲಿ  ಸಕ್ಕರೆ ಹಾಗು ನೀರು ಸೇರಿಸಿ ಕುದಿಸಿ, ಅದು ಒಂದೆಳೆ ಪಾಕಕ್ಕೆ ಬಂಡ ಕೂಡಲೇ ಅದಕ್ಕೆ ಗೋಡಂಬಿ ಮತ್ತು ಬಾದಾಮಿ ಪುಡಿ , ಹುರಿದ ರವಾ, ಕೇಸರಿ ಹಾಲು,ತುಪ್ಪ  ಹಾಗು ಏಲಕ್ಕಿ ಲವಂಗದ ಪುಡಿ ಸೇರಿಸಿ ಮಗುಚುತ್ತಿರಿ.

ನಂತರ ಅದು ತಳ ಬಿಡುತ್ತ ಬಂದಂತೆ ಅದನ್ನು ತುಪ್ಪ ಹಚ್ಚಿದ ಪ್ಲೇಟ್ ಗೆ ಹಾಕಿ, ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.

comments powered by Disqus