Manjushree's Kairuchi
Untitled Document

ಧೀಡಿರ್ ಮೆಕ್ಕೆಜೋಳದ ದೋಸೆ

Image
  • ಶೈಲಿ :ದಕ್ಷಿಣ ಭಾರತ
  • ಸರ್ವ್ :6
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಮೆಕ್ಕೆಜೋಳದ ಹಿಟ್ಟು ೨ ಕಪ್
  • ಅಕ್ಕಿ ಹಿಟ್ಟು ೧ ಕಪ್
  • ಉಪ್ಪು ರುಚಿಗೆ
  • ಹೆಚ್ಚಿದ ಶುಂಟಿ ೧/೪ ಟೀ ಚ
  • ಹೆಚ್ಚಿದ ಹಸಿಮೆಣಸು ೧ ಟೀ ಚ
  • ಜೀರಿಗೆ ೧/೨ ಟೀ ಚ
  • ಕರಿಮೆಣಸಿನ ಪುಡಿ ೧/೪ ಟೀ ಚ
  • ಕೊತ್ತೊಂಬರಿ ಸೊಪ್ಪು ಸ್ವಲ್ಪ
  • ಕರಿಬೇವು ಸ್ವಲ್ಪ
  • ತುಪ್ಪ ೨ ಟೇ ಚ
  • ಎಣ್ಣೆ ಸ್ವಲ್ಪ
  • ಹೆಚ್ಚಿದ ಈರುಳ್ಳಿ ಸ್ವಲ್ಪ

ಮಾಡುವ ವಿಧಾನ

"ಧೀಡಿರ್ ಮೆಕ್ಕೆಜೋಳದ ದೋಸೆ" ರುಚಿಕರ ಬೆಳಗಿನ ಉಪಹಾರ. ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ.

ಮೊದಲು ಒಂದು ಪಾತ್ರೆಗೆ ಅಕ್ಕಿಹಿಟ್ಟು, ಮೆಕ್ಕೆಜೋಳದ ಹಿಟ್ಟು, ಉಪ್ಪು, ಶುಂಟಿ, ಹಸಿಮೆಣಸು ಜೀರಿಗೆ, ಕರಿಮೆಣಸಿನಪುಡಿ, ಕೊತ್ತೊಂಬರಿ ಸೊಪ್ಪು ಹಾಗು ಕರಿಬೇವಿನ ಸೊಪ್ಪು ಹಾಕಿ ಬೇಕಾದಷ್ಟು ನೀರು ಸೇರಿಸಿ ದೋಸೆ ಹಿಟ್ಟನ್ನು ತಯಾರಿಸಿ ಕೊಳ್ಳಿ, ಹಿಟ್ಟು ಸ್ವಲ್ಪ ನೀರಾಗಿರಬೇಕು

ದೋಸೆ ತವಾ ಬಿಸಿ ಮಾಡಿ, ಅದಕ್ಕೆ  ಸ್ವಲ್ಪ ಎಣ್ಣೆ ಸವರಿ ನಂತರ ಹೆಚ್ಚಿದ ಈರುಳ್ಳಿ ಹಾಕಿ ಆಮೇಲೆ , ಕೈ ಅಥವಾ ಸೌಟಿನಿಂದ ಹಿಟ್ಟನ್ನು ಕಾವಲಿಗೆ ಮೇಲೆ  ಚಿಮುಕಿಸಿ, ಮೇಲಿನಿಂದ ತುಪ್ಪ ಸವರಿ ಸ್ವಲ್ಪ ಕೆಂಪಗಾಗುವ ವರೆಗೆ ಬೇಯಿಸಿ.

ಚಟ್ನಿ ಜೊತೆಗೆ ಸರ್ವ್ ಮಾಡಿ.

comments powered by Disqus