Manjushree's Kairuchi
Untitled Document

ನವಣೆ ಪಲಾವ್

Image
  • ಶೈಲಿ :ಉತ್ತರ ಭಾರತ
  • ಸರ್ವ್ :4
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಕ್ಯಾರಟ್ ೨
  • ಬೀನ್ಸ್ ೧೦
  • ಕ್ಯಾಪ್ಸಿಕಂ ೧
  • ಈರುಳ್ಳಿ ೧
  • ಶುಂಟಿ ೧ ಇಂಚು
  • ಬೆಳ್ಳುಳ್ಳಿ ೧೦ ಎಸಳುಗಳು
  • ಹಸಿ ಬಟಾಣಿ ೧/೪ ಕಪ್
  • ಟೊಮೇಟೊ ೨
  • ಆಲೂಗಡ್ಡೆ ೨
  • ಹಸಿಮೆಣಸು 4
  • ಹೋಂ ಮೇಡ್ ಪುಲಾವ್ ಪುಡಿ 2 ಟೇಬಲ್ ಚ
  • ಉಪ್ಪು ರುಚಿಗೆ ತಕ್ಕಷ್ಟು
  • ತುಪ್ಪ ೨ ಟೇಬಲ್ ಚ
  • ಕೊತ್ತೊಂಬರಿ ಸೊಪ್ಪು
  • ಜೀರಿಗೆ ೧ ಟೀ ಚ
  • ಅರಿಶಿನ ಚಿಟಿಕೆ
  • ನವಣೆ ಅಕ್ಕಿ ೨ ಕಪ್

ಮಾಡುವ ವಿಧಾನ

ನವಣೆ ಇದು ಸಿರಿಧಾನ್ಯಗಳಲ್ಲಿ ಒಂದು, ಇದನ್ನು ಸಾಮಾನ್ಯ ಬಿಳಿ ಅಕ್ಕಿ ಉಪಯೋಗಿಸಿ ಮಾಡುವ ಎಲ್ಲ ಅಡುಗೆಗಳನ್ನು ಮಾಡಬಹುದು. ಇಲ್ಲಿ ನಾನು ನವಣೆ ಉಪಯೋಗಿಸಿ ಪಲಾವ್ ಅನ್ನು ಮಾಡಿದ್ದೇನೆ, ಬಿಳಿ ಅಕ್ಕಿಗಿಂತ ಸ್ವಲ್ಪ ಮಸಾಲೆ ಪ್ರಮಾಣ ಜಾಸ್ತಿ ಬೇಕಾಗುತ್ತದೆ, ತಿನ್ನಲು ತುಂಬಾ ರುಚಿ ಹಾಗು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಮಾಡುವವಿಧಾನ ತಿಳಿಸಿದ್ದೇನೆ, ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ಆಲೂಗಡ್ಡೆ, ಕ್ಯಾರಟ್, ಕ್ಯಾಪ್ಸಿಕಂ ಮತ್ತು ಬೀನ್ಸ್ ಗಳನ್ನು ತೊಳೆದು ಸ್ವಲ್ಪ ದೊಡ್ಡದಾಗಿ ಹೆಚ್ಚಿ ಇಟ್ಟುಕೊಳ್ಳಿ.
ಹಾಗೆಯೇ ಈರುಳ್ಳಿ ಟೊಮೇಟೊ ವನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಿ.
ಈಗ ಒಂದು ಮಿಕ್ಸರ್ ಜಾರ್ ಗೆ ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಟಿ ಹಾಗು ಬೆಳ್ಳುಳ್ಳಿ ಸೇರಿಸಿ ತರಿ ತರಿ ರುಬ್ಬಿಟ್ಟುಕೊಳ್ಳಿ.
ಒಂದು ಕುಕ್ಕರ್ ಪಾತ್ರೆಯನ್ನು ಬಿಸಿಮಾಡಿ ಅದಕ್ಕೆ ತುಪ್ಪಹಾಕಿ ಕಾದ ಮೇಲೆ, ಜೀರಿಗೆ ಹಾಗು ರುಬ್ಬಿದ ಹಸಿಮೆಣಸಿನ ಮಿಶ್ರಣ ಸೇರಿಸಿ ಹುರಿದು, ಅದಕ್ಕೆ ಈರುಳ್ಳಿ ಹಾಗು ಟೊಮೇಟೊ ಸೇರಿಸಿ ಚೆನ್ನಾಗಿ ಬಾಡಿಸಿ.
ಈಗ ಅದಕ್ಕೆ ಅರಿಶಿನ, ಪುಲಾವ್ ಪುಡಿ, ಹೆಚ್ಚಿದ ತರಕಾರಿ ಹಾಗು ಹಸಿ ಬಟಾಣಿ ಸೇರಿಸಿ ಬಾಡಿಸಿ.
ಅಕ್ಕಿಯನ್ನು ತೊಳೆದು ಅದಕ್ಕೆ ೨ ರಷ್ಟು ನೀರನ್ನು ಸೇರಿಸಿ ಕುಕ್ಕರ್ ಗೆ ಹಾಕಿ, ಉಪ್ಪು ಸೇರಿಸಿ ತೊಳೆಸಿ ೨ ವಿಸೇಲ್ ಕೂಗಿಸಿ.

comments powered by Disqus