Manjushree's Kairuchi
Untitled Document

ಥಾಯ್ ಕರ್ರಿ ರೈಸ್

Image
  • ಶೈಲಿ :ಥೈಲ್ಯಾಂಡ್
  • ಸರ್ವ್ :4
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಮಸಾಲೆಗಾಗಿ :-
  • ಕೊತ್ತೊಂಬರಿ ಬೀಜ ೧ ಟೀ ಚ
  • ಜೀರಿಗೆ ೧/೨ ಟೀ ಚ
  • ಲಿಂಬೆ ಹುಲ್ಲು ೨
  • ಲವಂಗ ೪
  • ದಾಲ್ಚಿನಿ ಸಣ್ಣಚೂರು
  • ಚಕ್ರಮೊಗ್ಗು ಸಣ್ಣಚೂರು
  • ಸಾಂಬಾರ್ ಈರುಳ್ಳಿ ೫ -೬
  • ಬ್ಯಾಡಗಿ ಮೆಣಸು ೩ -೪
  • ಬೇರೆ ಸಾಮಗ್ರಿಗಳು :-
  • ಉದುರದ ಅನ್ನ ೨ ಕಪ್
  • ಕ್ಯಾಪ್ಸಿಕಂ ೧ /೨
  • ಬೇಯಿಸಿದ ಅವರೆಕಾಯಿ ೧/೪ ಕಪ್
  • ಹೆಚ್ಚಿದ ಮರಿಜೋಳ ೧/೨ ಕಪ್
  • ಬೆಣ್ಣೆ ೩ ದೊಡ್ಡ ಚ
  • ಪನೀರ್ ಚೂರುಗಳು15
  • ಉಪ್ಪು ರುಚಿಗೆ ತಕ್ಕಷ್ಟು
  • ಲಿಂಬೆರಸ ೧ ಟೀ ಚ
  • ದಪ್ಪ ತೆಂಗಿನಕಾಯಿ ಹಾಲು ೧/೪ ಕಪ್
  • ಹುರಿದ ನೆಲಗಡಲೆ ೨-೩ ದೊಡ್ಡ ಚ

ಮಾಡುವ ವಿಧಾನ

ಇದು ಸಾಂಪ್ರದಾಯಿಕ ಥೈಲ್ಯಾಂಡ್ ಶೈಲಿಯ ಒಂದು ಅನ್ನದಬಗ್ಗೆ, ಇದನ್ನು ಮಸ್ಸಾಮನ್  ಕರ್ರಿ  ರೈಸ್ ಎಂತಲೂ ಕರೆಯುತ್ತಾರೆ. ಮಸ್ಸಾಮನ್  ಕರ್ರಿ ಎಂದು ಏಕೆ ಕರೆಯುತ್ತಾರೆಂದರೆ, ೧೯ ನೇ ಶತಮಾನದಲ್ಲಿ ಥೈಲ್ಯಾಂಡ್ ನ ಮುಸಲ್ಮಾನರು ತಯಾರಿಸುತ್ತಿರುವ ಒಂದು ಅಡುಗೆ ಆದ್ದರಿಂದ ಇದನ್ನು ಹಾಗೆ ಕರೆಯುತ್ತಾರೆ. ಸಾಮಾನ್ಯವಾಗಿ ನಿಂಬೆಹುಲ್ಲು, ನೆಲಗಡಲೆ ಹಾಗು ತೆಂಗಿನಕಾಯಿ ಹಾಲು ಇಲ್ಲದೆ ಥೈಲ್ಯಾಂಡ್ ಅಡುಗೆಗಳುಪೂರ್ಣವಾಗುವುದೇ ಇಲ್ಲಹೇಳಿದರೆ ತಪ್ಪಾಗಲಾರದು. ತುಂಬಾ ಪರಿಮಳಭರಿತ ರುಚಿಕರ ಮಸ್ಸಾಮನ್  ಕರ್ರಿ  ರೈಸ್ ನಿಮಗಾಗಿ, ಮಾಡಿ ಅಭಿಪ್ರಾಯ ತಿಳಿಸಿ. 

ಮೇಲೆ ಮಸಾಲೆಗಾಗಿ ಹೇಳಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ನುಣ್ಣನೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. 
ಈಗ ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿಮಾಡಿ, ಅದಕ್ಕೆ ಕ್ಯಾಪ್ಸಿಕಂ ಮತ್ತು ಮರಿಜೋಳ ಸೇರಿಸಿ ಬೇಯುವವರೆಗೆ ಹುರಿಯಿರಿ. 
ನಂತರ ಅದಕ್ಕೆ ರುಬ್ಬಿದ ಪೇಸ್ಟ್, ಉಪ್ಪು ಸೇರಿಸಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ. 
ಈಗ ಅದಕ್ಕೆ ತೆಂಗಿನಹಾಲು, ಪನೀರ್, ಬೀನ್ಸ್ ಸೇರಿಸಿ ಹೊಂದಿಸಿ. ಕೊನೆಯಲ್ಲಿ ಬೇಯಿಸಿದ ಅನ್ನ, ಲಿಂಬೆರಸ ಹಾಗು ನೆಲಗಳೇ ಸೇರಿಸಿ ಚೆನ್ನಾಗಿ ಹೊಂದಿಸಿ, ಮೊಸರುಬಜ್ಜಿಯ ಜೊತೆಗೆ ಸರ್ವ್ ಮಾಡಿ. 

 

comments powered by Disqus