Manjushree's Kairuchi
Untitled Document

ಶ್ಯಾವಿಗೆ ಪುಲಾವ್

Image
  • ಶೈಲಿ :ದಕ್ಷಿಣ ಭಾರತ
  • ಸರ್ವ್ :4
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಕ್ಯಾರಟ್ ೨
  • ಬೀನ್ಸ್ ೧೦
  • ಕ್ಯಾಪ್ಸಿಕಂ ೧
  • ಈರುಳ್ಳಿ ೧
  • ಶುಂಟಿ ೧ಇಂಚು
  • ಬೆಳ್ಳುಳ್ಳಿ ೧೦ ಎಸಳುಗಳು ಹಸಿ ಬಟಾಣಿ ೧/೪ ಕಪ್
  • ಟೊಮೇಟೊ ೨
  • ಆಲೂಗಡ್ಡೆ ೨
  • ಹಸಿಮೆಣಸು ೨
  • ಗರಂ ಮಸಾಲಾ ಪುಡಿ ೧ ಟೇಬಲ್ ಚ
  • ಉಪ್ಪು ರುಚಿಗೆ ತಕ್ಕಷ್ಟು
  • ತುಪ್ಪ ೨ ಟೇಬಲ್ ಚ
  • ಕೊತ್ತೊಂಬರಿ ಸೊಪ್ಪು
  • ಜೀರಿಗೆ ೧ ಟೀ ಚ
  • ಅರಿಶಿನ ಚಿಟಿಕೆ
  • ಶ್ಯಾವಿಗೆ ೨ ಕಪ್
  • ಲಿಂಬೆರಸ ೧ ದೊಡ್ಡ ಚ

ಮಾಡುವ ವಿಧಾನ

"ಶ್ಯಾವಿಗೆ ಪುಲಾವ್ " ಸುಲಭದಲ್ಲಿ ಮಾಡಬಹುದಾದ ರುಚಿಕರ, ದಕ್ಷಿಣ ಭಾರತದ ರುಚಿಕರ ಬೆಳಗಿನ ಉಪಹಾರ. 

ಮೊದಲು ಆಲೂಗಡ್ಡೆ, ಕ್ಯಾರಟ್, ಕ್ಯಾಪ್ಸಿಕಂ ಮತ್ತು ಬೀನ್ಸ್ ಗಳನ್ನು ತೊಳೆದು ಸ್ವಲ್ಪ ದೊಡ್ಡದಾಗಿ ಹೆಚ್ಚಿ ಇಟ್ಟುಕೊಳ್ಳಿ.
ಹಾಗೆಯೇ ಈರುಳ್ಳಿ ಟೊಮೇಟೊ ವನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಿ.
ಈಗ ಒಂದು ಮಿಕ್ಸರ್ ಜಾರ್ ಗೆ ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಟಿ ಹಾಗು ಬೆಳ್ಳುಳ್ಳಿ ಸೇರಿಸಿ ತರಿ ತರಿ ರುಬ್ಬಿಟ್ಟುಕೊಳ್ಳಿ.
ಒಂದು ಬಾಣಲೆಯನ್ನು  ಬಿಸಿಮಾಡಿ ಅದಕ್ಕೆ ತುಪ್ಪಹಾಕಿ ಕಾದ ಮೇಲೆ,ಶ್ಯಾವಿಗೆ ಹಾಕಿ ಕೆಂಪಗೆ ಹುರಿದು ಇಟ್ಟುಕೊಳ್ಳಿ. 
ಇನ್ನೊಂದು ಬಾಣಲೆಯಲ್ಲಿ ತುಪ್ಪ ಬಿಸಿ  ಮಾಡಿ ಅದಕ್ಕೆ  ಜೀರಿಗೆ ಹಾಗು ರುಬ್ಬಿದ ಹಸಿಮೆಣಸಿನ ಮಿಶ್ರಣ ಸೇರಿಸಿ ಹುರಿದು, ಅದಕ್ಕೆ ಈರುಳ್ಳಿ ಹಾಗು ಟೊಮೇಟೊ ಸೇರಿಸಿ ಚೆನ್ನಾಗಿ ಬಾಡಿಸಿ.
ಈಗ ಅದಕ್ಕೆ ಅರಿಶಿನ, ಗರಂ ಮಸಾಲೆ  ಪುಡಿ,ಉಪ್ಪು, ಹೆಚ್ಚಿದ ತರಕಾರಿ ಹಾಗು ಹಸಿ ಬಟಾಣಿ ಸೇರಿಸಿ ಬಾಡಿಸಿ,೩ ಕಪ್ ನೀರು ಹಾಕಿ ಕುದಿಸಿ.
ನೀರು ಕುದಿಯಲು ಪ್ರಾರಂಭವಾಡಾ ಮೇಲೆ ಅದಕ್ಕೆ ಹುರಿದ ಶ್ಯಾವಿಗೆ ಹಾಕಿ ತೊಳೆಸಿ ಮುಚ್ಚಿ ಬೇಯಿಸಿ, ನೀರೆಲ್ಲ ಆರಿದ ಮೇಲೆ ಅದಕ್ಕೆ ಕೊತ್ತೊಂಬರಿ ಸೊಪ್ಪು ಮತ್ತು ಲಿಂಬೆರಸ ಸೇರಿಸಿ. 

 

comments powered by Disqus