Manjushree's Kairuchi
Untitled Document

ಸಿರಿಧಾನ್ಯಗಳ ತಂಬಿಟ್ಟು ಉಂಡೆ

Image
  • ಶೈಲಿ :ಕರ್ನಾಟಕ
  • ಸರ್ವ್ :4
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಸಿರಿಧಾನ್ಯಗಳು ೧ ಕಪ್
  • (ನವಣೆ
  • ಊದಲು
  • ಬರಗು
  • ಸಾಮೆ
  • ) ಬೆಲ್ಲ (ಜೋನಿಬೆಲ್ಲ ) ೧/೨ ಕಪ್
  • ಹಸಿ ತೆಂಗಿನತುರಿ ೧/೪ ಕಪ್
  • ಏಲಕ್ಕಿ ಪುಡಿ ಚಿಟಿಕೆ
  • ತುಪ್ಪ ೨ ಟೀ ಚಮಚ

ಮಾಡುವ ವಿಧಾನ

ತಂಬಿಟ್ಟು ಉಂಡೆ ಇದು ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ನಾಗರ ಪಂಚಮಿ ಹಬ್ಬಕ್ಕೆ ಮಾಡಿ ಅದರಲ್ಲಿಯೇ ದೀಪವನ್ನು ಹೊತ್ತಿಸುತ್ತಾರೆ. ತಂಬಿಟ್ಟು ಉಂಡೆಯನ್ನು ತುಂಬವಿಧಾನಗಳಲ್ಲಿ ಮಾಡುತ್ತಾರೆ ಆದರೆ ಸಾಂಪ್ರದಾಯಿಕವಾಗಿ ಹುರಿದ ಅಕ್ಕಿ,ಬೆಲ್ಲ ಮತ್ತು ಕಾಯಿಗಳನ್ನು  ಸೇರಿಸಿ ಮಾಡುವದು ವಿಶೇಷ. ಇಲ್ಲಿ ನಾನು ಸಿರಿಧಾನ್ಯಗಳನ್ನು ಉಪಯೋಗಿಸಿ ಆರೋಗ್ಯಕರ ತಂಬಿಟ್ಟನ್ನು ಮಾಡಿದ್ದೇನೆ. 

ಮೊದಲು ಸಿರಿಧಾನ್ಯಗಳನ್ನು ತೊಳೆದು,ಹತ್ತಿ ಬಟ್ಟೆಯ ಮೇಲೆ ಹರವಿ ಹಾಕಿ.
ಅದು ಒಣಗಿದಮೇಲೆ ಕೆಂಪಗೆ ಹುರಿದು, ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಬೆಲ್ಲ, ಕಾಯಿತುರಿ, ಏಲಕ್ಕಿಪುಡಿ, ತುಪ್ಪ ಮತ್ತು ಸ್ವಲ್ಪ ನೀರು ಸೇರಿಸಿ ಕುದಿಯಲು ಬಿಡಿ.
ಈಗ ಬೆಲ್ಲದ ಮಿಶ್ರಣ ಒಂದೆಳೆ ಪಾಕದ ಹದಕ್ಕೆ ಬಂದಮೇಲೆ ಅದಕ್ಕೆ ಪುಡಿ ಮಾಡಿದ ಸಿರಿಧಾನ್ಯದ ಹಿಟ್ಟು ಸೇರಿಸಿ ಚೆನ್ನಾಗಿ ಹೊಂದಿಸಿ.
ಮಿಶ್ರಣ ತಣಿದ ಮೇಲೆ ಲಿಂಬೆ ಗಾತ್ರದಉಂಡೆಗಳಾಗಿ ಮಾಡಿ 

comments powered by Disqus