Manjushree's Kairuchi
Untitled Document

ಗರಂ ಮಸಾಲೆ ಪುಡಿ

Image
  • ಶೈಲಿ :ಉತ್ತರ ಭಾರತ
  • ಸರ್ವ್ :20
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಕೊತ್ತೊಂಬರಿ ಬೀಜ ೧/೪ ಕಪ್
  • ಜೀರಿಗೆ ೧/೨ ಕಪ್
  • ಏಲಕ್ಕಿ ೧/೨ ಕಪ್
  • ಕರಿಮೆಣಸು ೧/೪ ಕಪ್
  • ಸೋಂಪು ೩ ದೊಡ್ಡ ಚಮಚ
  • ಲವಂಗ ೨ ದೊಡ್ಡ ಚಮಚ
  • ದಾಲ್ಚಿನಿ ಚಕ್ಕೆ (೧ ಇಂಚು)೧೦-೧೫
  • ಪುಲಾವ್ ಎಲೆ ೧/೪ ಕಪ್
  • ಶಾಹಿ ಜೀರಾ ೨ ದೊಡ್ಡ ಚಮಚ
  • ಜಾಯಿಕಾಯಿ ೧
  • ಒಣ ಶುಂಠಿ ಪುಡಿ ೧ ಟೀ ಚ
  • ಚಕ್ರಮೊಗ್ಗು ೧/೨
  • ಜಾಪತ್ರೆ ೧
  • ಕಲ್ಲು ಹೂವು ೨

ಮಾಡುವ ವಿಧಾನ

ಗರಂ ಮಸಾಲೆ ಪುಡಿ ಉತ್ತರ ಭಾರತ ಅಡುಗೆಗಳಲ್ಲಿ ಅತ್ಯಾವಶ್ಯವಾಗಿ ಇರುವ ಒಂದು ಪುಡಿ, ಇದಿಲ್ಲದೆ ಸಾಮಾನ್ಯವಾಗಿ ಅಲ್ಲಿಯ ಅಡುಗೆಗಳೇ ಇಲ್ಲವೆಂದು ಹೇಳಬಹುದು. ಈಗ ಅಂಗಡಿಗಳಲ್ಲಿ ಹತ್ತು ಹಲವು ಕಂಪನಿಗಳ ಗರಂ ಮಸಾಲಾ ಪುಡಿ ಸಿಗುತ್ತವೆ ಆದರೆ ಎಲ್ಲವು ನಮಗೆ ಇಷ್ಟವಾಗಬೇಕು ಎಂದು ಏನಿಲ್ಲ, ಈ ಪುಡಿಗಳನ್ನು ನಾವೇ ಮನೆಗಳಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು. ಮಾಡುವ ವಿಧಾನ ತಿಳಿಸಿದ್ದೇನೆ ಮಾಡಿ ಅಭಿಪ್ರಾಯ ತಿಳಿಸಿ.

ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಸ್ವಲ್ಪ ಪರಿಮಳ ಬರುವವರೆಗೆ ಹುರಿದು ತಣಿಯಲು ಬಿಡಿ.
ನಂತರ ಅದನ್ನು ನುಣ್ಣಗೆ ಪುಡಿ ಮಾಡಿ. ಗಾಳಿಸಿ ನುಣ್ಣನೆಯ ಪುಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಇಟ್ಟುಕೊಳ್ಳಿ.  

 

 

comments powered by Disqus