Manjushree's Kairuchi
Untitled Document

ಬಿಸಿಬೇಳೆ ಬಾತ್ ಪುಡಿ

Image
  • ಶೈಲಿ :ಕರ್ನಾಟಕ
  • ಸರ್ವ್ :10
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಕೊತ್ತೊಂಬರಿ ಬೀಜ ೨
  • ೧/೨ ದೊಡ್ಡ ಚಮಚ
  • ಕಡ್ಲೆಬೇಳೆ ೨
  • ೧/೨ ದೊಡ್ಡ ಚಮಚ
  • ಬಿಳಿಎಳ್ಳು ೧ ದೊಡ್ಡ ಚಮಚ
  • ಉದ್ದಿನಬೇಳೆ ೧ ದೊಡ್ಡ ಚಮಚ
  • ಬ್ಯಾಡಗಿ ಕೆಂಪುಮೆಣಸು ೧೦ -೧೫
  • ಜೀರಿಗೆ ೧ ದೊಡ್ಡ ಚಮಚ
  • ಕರಿಮೆಣಸು ½ ಟೀ ಚ
  • ಏಲಕ್ಕಿ ೨-೪
  • ದಾಲ್ಚಿನಿ ಚಕ್ಕೆ ೧ ಇಂಚ್
  • ಜಾಯಿಕಾಯಿ ೧ ಇಂಚು ಚೂರು
  • ಲವಂಗ ೬
  • ಗಸಗಸೆ ೧ ಟೀ ಚ
  • ಮೆಂತೆಕಾಳು ೧/೪ ಟೀ ಚ
  • ಇಂಗು ೧ ಟೀ ಚ
  • ಒಣಕೊಬ್ಬರಿ ತುರಿ ೨ ದೊಡ್ಡ ಚಮಚ
  • ಕರಿಬೇವು ೧೦

ಮಾಡುವ ವಿಧಾನ

"ಬಿಸಿಬೇಳೆ ಬಾತ್ " ಇದು ಕರ್ನಾಟಕದ ಜನಪ್ರೀಯ ಬೆಳಗಿನ ಉಪಹಾರದ ತಿಂಡಿ ಯಾಗಿದೆ, ಇದನ್ನು ಬಿಸಿ ಬೇಳೆ ಹುಳಿ ಅನ್ನ ಎಂತಲೂ ಕರೆಯುತ್ತಾರೆ. ಇದನ್ನು ಮಾಡಲು ಮುಖ್ಯವಾಗಿ  ಒಂದು ಮಸಾಲೆ ಪುಡಿಯ ಅಗತ್ಯ ಇದೆ ಅದನ್ನು ಮಾಡುವ ವಿಧಾನ ತಿಳಿಸಿದ್ದೇನೆ. ನೋಡಿ ಪ್ರಯತ್ನಿಸಿ. 

ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಬೇರೆ ಬೇರೆ ಹುರಿದು ತಣಿಯಲು ಬಿಡಿ.
ನಂತರ ಮಿಕ್ಸಿ ಜಾರ್ ನಲ್ಲಿ ನುಣ್ಣಗೆ ಪುಡಿ ಮಾಡಿ.
ಇದನ್ನು ಜರಡಿ ಹಿಡಿದು ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿ ಇಡಿ.

comments powered by Disqus