Manjushree's Kairuchi
Untitled Document

ಪಾಲಕ್ ಮರಿಜೋಳದ ಬಿರಿಯಾನಿ

Image
  • ಶೈಲಿ :ದಕ್ಷಿಣಭಾರತ - ಫ್ಯೂಶನ್
  • ಸರ್ವ್ :4
  • ಸಮಯ :1 - 2 ಗಂಟೆ

ಬೇಕಾಗುವ ಸಾಮಗ್ರಿಗಳು

  • ಪಾಲಕ್ ಸೊಪ್ಪು ೧ ಗೊಂಚಲು
  • ಪುದಿನ ಸೊಪ್ಪು ೧/೪ ಬಟ್ಟಲು
  • ಕೊತ್ತೊಂಬರಿ ಸೊಪ್ಪು ೧/೪ ಬಟ್ಟಲು
  • ಹಸಿಮೆಣಸು ೧
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ೧ ದೊಡ್ಡ ಚ
  • ಬಾಸಮತಿ ಅಕ್ಕಿ ೨ ಕಪ್
  • ಈರುಳ್ಳಿ ೨
  • ದೊಡ್ಡಮೆಣಸು ೧
  • ಮರಿಜೋಳ ೧೦ -೧೫
  • ಶಾಹಿ ಜೀರಾ ೧/೪ ಟೀ ಚ
  • ಲವಂಗ ೪
  • ದಾಲ್ಚಿನಿ ಚಕ್ಕೆ ೧ ಇಂಚು
  • ಏಲಕ್ಕಿ ೨
  • ಚಕ್ರ ಮೊಗ್ಗು 1
  • ಗಟ್ಟಿ ಮೊಸರು ೧/೪ ಕಪ್
  • ತುಪ್ಪ ೪ ದೊಡ್ಡ ಚ
  • ಬಿರಿಯಾನಿ ಮಸಾಲಾ ಪುಡಿ ೧ ದೊಡ್ಡ ಚ
  • ಉಪ್ಪು ರುಚಿಗೆ ತಕ್ಕಷ್ಟು
  • ಅರಿಶಿನ ಚಿಟಿಕೆ
  • ಲಿಂಬೆರಸ ೧ ದೊಡ್ಡ ಚ

ಮಾಡುವ ವಿಧಾನ

ಪಾಲಕ್ ಸೊಪ್ಪು ನೋಡಿದಕೂಡಲೇ ಕಣ್ಣಿಗೆ ಒಂದು ತಂಪುಕೊಡುವ ಬಣ್ಣ, ಹಾಗೆಯೇ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಸೊಪ್ಪುಗಳೆಲ್ಲವೂ ಆರೋಗ್ಯಕ್ಕೆ ಒಳ್ಳೆಯದು ಇವುಗಳನ್ನು ಹಸಿರು ರಕ್ತ ಭಂಡಾರ ಎಂತಲೇ ಕರೆಯುತ್ತಾರೆ, ಸೊಪ್ಪುಗಳಲ್ಲಿ ಖನಿಜ ಜಾಸ್ತಿ ಇರುವದರಿಂದ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. ಆದರೆ ಮಕ್ಕಳು ಸೊಪ್ಪನ್ನು ತಿನ್ನಲು ಇಷ್ಟಪಡುವದಿಲ್ಲ ಅದಕ್ಕೆ ಅದನ್ನ ರುಬ್ಬಿ ಅಡುಗೆಗಳನ್ನು ಮಾಡಿದರೆ ಅದರ ಬಣ್ಣ ಮಕ್ಕಳಿಗೆ ಇಷ್ಟವಾಗುತ್ತದೆ ಹಾಗೆಯೇ ಆರೋಗ್ಯಕ್ಕೂ ಕೂಡ ಒಳ್ಳೆಯದು. 

ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಹಾಗು ಅಕ್ಕಿಯನ್ನು ಹಾಕಿ ಬೇಯಲು ಬಿಡಿ. ಅಕ್ಕಿ ಬೆಂದಮೇಲೆ ನೀರೆಲ್ಲ ಬಸಿದು ಇಟ್ಟುಕೊಳ್ಳಿ. 
ಪಾಲಕ್ ಸೊಪ್ಪು, ಪುದಿನ,ಕೊತ್ತೊಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ಸೇರಿಸಿ ರುಬ್ಬಿ  ಪೇಸ್ಟ್ ಮಾಡಿಟ್ಟುಕೊಳ್ಳಿ. 
ಮರಿಜೋಳ, ಈರುಳ್ಳಿ ಮತ್ತು ದೊಡ್ಡಮೆಣಸನ್ನು ಉದ್ದುದ್ದಕ್ಕೆ ಹೆಚ್ಚಿ ಇಟ್ಟುಕೊಳ್ಳಿ. 
ಈಗ ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಚಕ್ಕೆ, ಶಾಹಿ ಜೀರಾ, ಲವಂಗ, ಏಲಕ್ಕಿ ಹಾಗು ಚಕ್ರಮೊಗ್ಗನ್ನು ಸೇರಿಸಿ ಅರೋಮಾ ಬರುವವರೆಗೆ ಹುರಿಯಿರಿ.
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಮರಿಜೋಳ ಮತ್ತು ದೊಡ್ಡಮೆಣಸನ್ನು ಸೇರಿಸಿ ಬಾಡಿಸಿ.
ಈಗ ಅದಕ್ಕೆ ರುಬ್ಬಿದ ಪೇಸ್ಟ್, ಅರಿಶಿನ,ಬಿರಿಯಾನಿ ಪುಡಿ, ಉಪ್ಪು ಮತ್ತು ಮೊಸರನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
ಕೊನೆಯಲ್ಲಿ ಮಾಡಿಟ್ಟ ಅನ್ನ ಮತ್ತು ಲಿಂಬೆರಸ ಸೇರಿಸಿ ಚೆನ್ನಾಗಿ ಹೊಂದಿಸಿ. 

comments powered by Disqus