Manjushree's Kairuchi
Untitled Document

ಸಾಂಬಾರು ಪುಡಿ

Image
  • ಶೈಲಿ :ಮಲೆನಾಡು
  • ಸರ್ವ್ :30
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಕೊತ್ತೊಂಬರಿ ಬೀಜ ೧ ಕಪ್
  • ಜೀರಿಗೆ ೧/೪ ಕಪ್
  • ಬಿಳಿಎಳ್ಳು ೧/೪ ಕಪ್
  • ಮೆಂತೆ ಕಾಳು ೨ ಟೀ ಚ
  • ಇಂಗು ೧ ಟೀ ಚ
  • ಕೆಂಪುಮೆಣಸು ೧೫-೨೦
  • ಕರಿಬೇವು ೧೫-೨೦
  • ಸಾಸಿವೆ ೨ ಟೀಚ
  • ಲವಂಗ ೪-೬

ಮಾಡುವ ವಿಧಾನ

ಸಾಂಬಾರು  ಇದು ದಕ್ಷಿಣ ಭಾರತದ ಜನಪ್ರೀಯ ಅಡುಗೆಗಳಲ್ಲಿ ಒಂದು, ಊಟದಲ್ಲಿ ಉಪ್ಪಿನಕಾಯಿ ಎಷ್ಟು ಮಹತ್ವ ಪಡೆದಿದೆಯೋ ಹಾಗೆ ದಕ್ಷಿಣ ಭಾರತದವರಿಗೆ ಸಾರು - ಸಾಂಬಾರು ಅದಿಲ್ಲದೆ ಊಟವೇ ಇಲ್ಲ, ಸಾಂಬಾರಿಗೆ ಕೆಲವು ಕಡೆಗಳಲ್ಲಿ ಹುಳಿ ಅಂತಲೂ ಕರೆಯುತ್ತಾರೆ. ಈ ಸಾಂಬಾರನ್ನು  ಬೇರೆ ಬೇರೆ ಪಂಗಡದವರು ವಿಧ ವಿಧ ರೀತಿಯಲ್ಲಿ ಮಾಡುತ್ತಾರೆ, ಕರ್ನಾಟಕದಲ್ಲೇ ತೆಗೆದುಕೊಂಡರೆ ಮಲೆನಾಡಿನ ಕಡೆ ಒಂದು ವಿಧಾನದಲ್ಲಿ ಮಾಡಿದರೆ, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಕಡೆ ಇನ್ನೊಂದು ವಿಧಾನ ಹಾಗೆ ಬೆಂಗಳೂರು ಮೈಸೂರು ಕಡೆಗೆ ಬೇರೆಯೇ ರೀತಿಯಲ್ಲಿ ಮಾಡುತ್ತಾರೆ. ಹಾಗೆಯೇ ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು,ಕೇರಳ ಅವರುಗಳು ಮಾಡುವವಿಧಾನ ಬೇರೆ ಬೇರೆ. 
ಇಂದು ನಾನು ಇಲ್ಲಿ ನಮ್ಮ ಮಲೆನಾಡು ಬ್ರಾಹ್ಮಣರ  ಶೈಲಿಯಲ್ಲಿ ಸಾಂಬಾರು ಪುಡಿ ಮಾಡುವ ವಿಧಾನವನ್ನು ತಿಳಿಸುತ್ತೇನೆ.ಸಾಮಾನ್ಯವಾಗಿ ಆಗಿಂದಾಗಲೇ ಹುರಿದು ಮಾಡಿದ ಸಾಂಬಾರ್ ಆದರೆ ರುಚಿ ಜಾಸ್ತಿ, ಈಗಿನ ಒತ್ತಡದ ಬದುಕಿನಲ್ಲಿ ಪ್ರತಿದಿನ ಮಾಡಿಕೊಳ್ಳಲು ಸಮಯದ ಅಭಾವ ಅದಕ್ಕೆ ಹೀಗೆ ಪುಡಿಮಾಡಿ ಇಟ್ಟುಕೊಂಡರೆ ಬೇಗ ಮಾಡಬಹುದು. 

ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಬೇರೆ ಬೇರೆ ಹೊಂಬಣ್ಣ ಬರುವವರೆಗೆ ಹುರಿದು ಆರಲು ಬಿಡಿ.
ಈಗ ಎಲ್ಲವನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿ ...ಬಟ್ಟೆಯ ಮೇಲೆ ಅರ್ಧ ಗಂಟೆ ಆರಲು ಬಿಡಿ.
ಈ ಪುಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಇಡಿ. 

comments powered by Disqus