Manjushree's Kairuchi
Untitled Document

ಮೇಥಿ ಪನೀರ್ ಪುಲಾವ್

Image
  • ಶೈಲಿ : ಫ್ಯೂಶನ್
  • ಸರ್ವ್ :4
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಮೆಂತೆ ಸೊಪ್ಪು ೧ ಗೊಂಚಲು
  • ಹಸಿಮೆಣಸು ೨
  • ಕೊತ್ತೊಂಬರಿ ಸೊಪ್ಪು ಸ್ವಲ್ಪ
  • ಶುಂಠಿ ೧ ಇಂಚು
  • ಬೆಳ್ಳುಳ್ಳಿ ಎಸಳುಗಳು ೬-೮
  • ಈರುಳ್ಳಿ ೧
  • ಪನೀರ್ ಚೂರುಗಳು ೧/೪ ಕಪ್
  • ಟೊಮೇಟೊ ಕಾಯಿ ೨
  • ಉಪ್ಪು ರುಚಿಗೆ ತಕ್ಕಷ್ಟು
  • ಬಾಸುಮತಿ ಅಕ್ಕಿ ೨ ಕಪ್
  • ತುಪ್ಪ ೨ ದೊಡ್ಡ ಚಮಚ
  • ತೆಂಗಿನಹಾಲು ೨ ಕಪ್
  • ಅರಿಶಿನ ಸ್ವಲ್ಪ
  • ಪುಲಾವ್ ಪುಡಿ ೧ ದೊಡ್ಡ ಚಮಚ
  • ನಿಂಬೆಹಣ್ಣಿ ೧/೨
  • ಜೀರಿಗೆ ೧/೨ ಟೀ ಚ
  • ಚಕ್ಕೆ ೧ ಇಂಚು. ಲವಂಗ ೨. ಏಲಕ್ಕಿ ೨

ಮಾಡುವ ವಿಧಾನ

ರಕ್ತ ಹೀನತೆ ಈಗೀಗ ಅತಿಯಾಗಿ ಕೇಳಿಬರುವಂಥಹ ಸಮಸ್ಯೆ. ನಮ್ಮ ಭಾರತದಲ್ಲಿ ೫೦% ಜನರು ಈ ಸಮಸ್ಯೆಯಿಂದ ಬಳಲುತ್ತ ಇದ್ದಾರೆ, ಅದರಲ್ಲೂ ಮಹಿಳೆಯರ ಸಂಖ್ಯೆ ಜಾಸ್ತಿ ಎಂದು ಹೇಳಬಹುದು. ರಕ್ತಹೀನತೆ ಅಂದರೆ ನಮ್ಮ ದೇಹದಲ್ಲಿ ಕೆಂಪು ರಕ್ತಕಣಗಳ ಕೊರತೆ ಇದರಿಂದ ಸುಸ್ತು, ಅನಾಸಕ್ತಿ, ನಿದ್ರಾಹೀನತೆ ಕೆಲವೊಂದು ಸಮಸ್ಯೆಗಳನ್ನ ಎದುರಿಸಬೇಕಾಗುವುದು. ಇದನ್ನ ಪರಿಹರಿಸುವದು ಹೇಗೆ ? ನಮ್ಮ ಆಹಾರ ಕ್ರಮ ಹೌದು ನಮ್ಮ ಆಹಾರದಲ್ಲಿ ನಮ್ಮ ದೇಹಕ್ಕೆ ಬೇಕಾದ ಎಲ್ಲ ಅಂಶಗಳನ್ನು ಒದಗಿಸುವ ಶಕ್ತಿಯನ್ನು ಹೊಂದಿದೆ ಸಮಪ್ರಮಾಣದ ಸಮತೋಲನ ಹಾಗು ಪ್ರಕೃತಿದತ್ತ ಆಹಾರ ಸೇವನೆಯಿಂದ ನಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ರಕ್ತಹೀನತೆಗೆ ನಮ್ಮ ಸುತ್ತಮುತ್ತಲು ಸಿಗುವ ಅದರಲ್ಲೂ ಹಸಿರು ಸಸ್ಯಗಳು ಪಾಲಕ್,ಮೆಂತೆ,ದಂಟಿನಸೊಪ್ಪು, ಕೊತ್ತೊಂಬರಿ ಸೊಪ್ಪು ಇವೆಲ್ಲ ತುಂಬಾ ಸಹಾಯಕಾರಿ. ಮೆಂತೆಸೊಪ್ಪು ತುಂಬಾ ಪ್ರಮಾಣದಲ್ಲಿ ಕಬ್ಬಿಣದ ಅಂಶವನ್ನು ಹೊಂದಿದ್ದು ಇದನ್ನು ವಾರಕ್ಕೆ ೨-೩ ಸಲ ನಿಯಮಿತವಾಗಿ ಬಳಸುತ್ತ ಬಂದಲ್ಲಿ ಈ ಸಮಸ್ಯೆಯಿಂದ ಮುಕ್ತಿಯನ್ನ ಪಡೆಯಬಹುದು. ಈ ಸೊಪ್ಪನ್ನು ಉಪಯೋಗಿಸಿ ರುಚಿಕರ ಅನ್ನದ ಬಗೆ ಇಂದು ನಿಮಗಾಗಿ. ಹೇಗೆ ಮಾಡುವದು, ಬೇಕಾಗುವ ಸಾಮಗ್ರಿಗಳನ್ನು ವಿವರಿಸಿದ್ದೇನೆ ಮಾಡಿ ಅಭಿಪ್ರಾಯ ತಿಳಿಸಿ. 

ಮೊದಲು ಹಸಿಮೆಣಸು, ಶುಂಠಿ,ಬೆಳ್ಳುಳ್ಳಿ ಮತ್ತು ಕೊತ್ತೊಂಬರಿ ಸೊಪ್ಪನ್ನು ತರಿ ತರಿ ರುಬ್ಬಿಟ್ಟುಕೊಳ್ಳಿ.
ಕುಕ್ಕರ್ ನಲ್ಲಿ ತುಪ್ಪ ಬಿಸಿಮಾಡಿ ಅದಕ್ಕೆ ಜೀರಿಗೆ, ಚಕ್ಕೆ, ಲವಂಗ ಮತ್ತು ಏಲಕ್ಕಿ ಸೇರಿಸಿ ಸ್ವಲ್ಪ ಹುರಿಯಿರಿ.
ಈಗ ಅದಕ್ಕೆ ತರಿ ತರಿ ರುಬ್ಬಿದ ಮಿಶ್ರಣ, ಈರುಳ್ಳಿ ಹಾಗು ಹೆಚ್ಚಿದ ಟೊಮೇಟೊ ಸೇರಿಸಿ ಹುರಿಯಿರಿ.
ಈರುಳ್ಳಿ ಮತ್ತು ಟೊಮೇಟೊ ಸ್ವಲ್ಪ ಬೆಂದಮೇಲೆ ಮೆಂತೆಸೊಪ್ಪು ಹಾಕಿ ಬಾಡಿಸಿ.
ಈ ಹಂತದಲ್ಲಿ ಅದಕ್ಕೆ ಪನೀರ್ ಚೂರುಗಳು, ಅಕ್ಕಿ, ಉಪ್ಪು, ಪುಲಾವ್ ಪುಡಿ,ತೆಂಗಿನಹಾಲು ಮತ್ತು ೨ ಕಪ್ ನೀರು ಸೇರಿಸಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ೨ ವಿಸೇಲ್ ಕೂಗಿಸಿ.
ಕೊನೆಯಲ್ಲಿ ಸ್ವಲ್ಪ ಲಿಂಬೆರಸ ಸೇರಿಸಿ ಹೊಂದಿಸಿ ಬಿಸಿ ಬಿಸಿ ಸರ್ವ್ ಮಾಡಿ. 

 

comments powered by Disqus