Manjushree's Kairuchi
Untitled Document

ಕೆಸುವಿನಗೆಡ್ಡೆ ಮಸಾಲಾ ಕರ್ರಿ

Image
  • ಶೈಲಿ :ಫ್ಯೂಶನ್
  • ಸರ್ವ್ :4
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಬೇಯಿಸಿದ ಕೆಸುವಿನಗೆಡ್ಡೆ 6-8
  • ಕ್ಯಾಪ್ಸಿಕಂ 1/2
  • ತುಪ್ಪ 1 ಟೇ ಚ
  • ಬೆಣ್ಣೆ 1 ಟೇ ಚ
  • ಉಪ್ಪು ರುಚಿಗೆ ತಕ್ಕಷ್ಟು
  • ಕಸೂರಿ ಮೇಥಿ ಸ್ವಲ್ಪ
  • ಫ್ರೆಶ್ ಕ್ರೀಮ್ 2 ಟೇ ಚ
  • ಮಸಾಲೆಗೆ :-
  • ತೆಂಗಿನತುರಿ 1/2 ಕಪ್
  • ಗೋಡಂಬಿ 1 ಟೇ ಚ
  • ಬಾದಾಮಿ 6
  • ಕೆಂಪು ಮೆಣಸು 3-4
  • ಶುಂಠಿ ಸಣ್ಣ ಚೂರು
  • ಲವಂಗ 3
  • ಚಕ್ಕೆ ಸಣ್ಣಚೂರು
  • ಸೋಂಪು 1 ಟೀ ಚ
  • ಜೀರಿಗೆ 1/2 ಟೀಚ
  • ಕೊತ್ತೊಂಬರಿ 1 ಟೀ ಚ

ಮಾಡುವ ವಿಧಾನ

ರುಚಿಕರ "ಕೆಸುವಿನಗೆಡ್ಡೆ ಮಸಾಲಾ ಕರ್ರಿ" ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ.

ಮೊದಲು ಮಸಾಲೆಗೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ನುಣ್ಣಗೆ  ರುಬ್ಬಿಟ್ಟುಕೊಳ್ಳಿ.
ಕೆಸುವಿನ ಗೆಡ್ಡೆಯ ಸಿಪ್ಪೆ ತೆಗೆದು ಹೆಚ್ಚಿಟ್ಟುಕೊಳ್ಳಿ.ಹಾಗೆಯೇ ಕ್ಯಾಪ್ಸಿಕಂ ಅನ್ನು ಹೆಚ್ಚಿಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ತುಪ್ಪ ಬಿಸಿ  ಮಾಡಿ ಅದಕ್ಕೆ ಕ್ಯಾಪ್ಸಿಕಂ ಮತ್ತು ಕಸೂರಿ ಮೇಥಿ ಸೇರಿಸಿ ಸ್ವಲ್ಪ ಹುರಿಯಿರಿ.
ನಂತರ ಅದಕ್ಕೆ ರುಬ್ಬಿದಮಸಾಲೆ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಬಾಡಿಸಿ.
ಈಗ ಅದಕ್ಕೆ ಸ್ವಲ್ಪ ನೀರು, ಉಪ್ಪು ಬೇಯಿಸಿದ ಕೆಸುವಿನಗೆಡ್ಡೆ ಕುದಿಸಿ.
ಕೊನೆಯಲ್ಲಿ ಫ್ರೆಶ್ ಕ್ರೀಮ್ ಹಾಗು ಬೆಣ್ಣೆ ಸೇರಿಸಿ ಹೊಂದಿಸಿ. 

comments powered by Disqus