Manjushree's Kairuchi
Untitled Document

ಪಾಸ್ತಾ ಸಲಾಡ್

Image
  • ಶೈಲಿ :ಇಟಾಲಿಯನ್
  • ಸರ್ವ್ :2
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಪಾಸ್ತಾ 1 ಕಪ್
  • ಟೊಮ್ಯಾಟೋ 2
  • ಹೆಚ್ಚಿದ ಕ್ಯಾರಟ್ 1/4 ಕಪ್
  • ಹೆಚ್ಚಿದ ಈರುಳ್ಳಿ 1/4 ಕಪ್
  • ಹೆಚ್ಚಿದ ಬೀನ್ಸ್ 1/4 ಕಪ್
  • ಹೆಚ್ಚಿದ ಕ್ಯಾಪ್ಸಿಕಂ 1/4 ಕಪ್
  • ಹಸಿ ಬಟಾಣಿ 2 ಟೇ ಚ
  • ಓರಿಗೆನೋ 1 ಟೀ ಚ
  • ಉಪ್ಪು ರುಚಿಗೆ ತಕ್ಕಷ್ಟು
  • ಕೆಂಪು ಮೆಣಸಿನಪುಡಿ 1 ಟೀಚ
  • ಎಣ್ಣೆ 1 ಟೇ ಚ
  • ಬೆಳ್ಳುಳ್ಳಿ 2 ಎಸಳು
  • ಕೊತ್ತೊಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ

ತೂಕ ಇಳಿಸಲು ಹೇಳಿ ಮಾಡಿಸಿದ ಸಲಾಡ್ ಈ"ಪಾಸ್ತಾ ಸಲಾಡ್ " ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ.

ಮೊದಲು ನೀರನ್ನು ಕುದಿಯಲು ಇಡೀ, ಅದಕ್ಕೆ ಪಾಸ್ತಾ ಚಿಟಿಕೆ ಉಪ್ಪು  ಹಾಕಿ ಪಾಸ್ತಾ ಬೇಯುವವರೆಗೆ ಕುದಿಸಿ.
ನಂತರ ನೀರನ್ನು ಬಸಿದು ಇಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಟೊಮ್ಯಾಟೋ , ಹೆಚ್ಚಿದ ತರಕಾರಿಗಳು ಹಾಗೂ ಹಸಿ ಬಟಾಣಿ ಸೇರಿಸಿ ಚೆನ್ನಾಗಿ ಬೇಯುವವರೆಗೆ ಹುರಿಯಿರಿ. 
ನಂತರ ಅದಕ್ಕೆ ಮೆಣಸಿನ ಪುಡಿ, ಉಪ್ಪು, ಬೇಯಿಸಿದಪಾಸ್ತ, ಓರಿಗೆನೋ  ಹಾಗೂ ಕೊತ್ತೊಂಬರಿ ಸೊಪ್ಪು ಹಾಕಿ ಚೆನ್ನಾಗಿ ಹೊಂದಿಸಿ.  

 

comments powered by Disqus