Manjushree's Kairuchi
Untitled Document

ಓಟ್ಸ್ ಸೂಪ್

Image
  • ಶೈಲಿ :ಫ್ಯೂಶನ್
  • ಸರ್ವ್ :2
  • ಸಮಯ :30 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಓಟ್ಸ್ ೧/೪ ಕಪ್
  • ಹೆಚ್ಚಿದ ಈರುಳ್ಳಿ ೨ ಟೇ ಚ
  • ಹೆಚ್ಚಿದ ಬೀನ್ಸ್ ೨ ಟೇ ಚ
  • ಹೆಚ್ಚಿದ ಕ್ಯಾರಟ್ ೨ ಟೇ ಚ
  • ಹೆಚ್ಚಿದ ಕ್ಯಾಪ್ಸಿಕಂ ೨ ಟೇ ಚ
  • ಹಸಿ ಬಟಾಣಿ ೨ ಟೇ ಚ
  • ಹೆಚ್ಚದ ಬೆಳ್ಳುಳ್ಳಿ ೧ ಟೀ ಚ
  • ಹೆಚ್ಚದ ಟೊಮೇಟೊ ೨ ಟೇ ಚ
  • ಕೆಂಪು ಮೆಣಸಿನ ಸಾಸ್ ೧ ಟೇ ಚ
  • ಉಪ್ಪು ರುಚಿಗೆ ತಕ್ಕಷ್ಟು
  • ಬೆಣ್ಣೆ ೧ ಟೀ ಚ
  • ಕರಿಮೆಣಸಿನ ಪುಡಿ ಸ್ವಲ್ಪ
  • ಕೊತ್ತೊಂಬರಿ ಸೊಪ್ಪು

ಮಾಡುವ ವಿಧಾನ

"ಓಟ್ಸ್ ಸೂಪ್ " ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ.

ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಹುರಿಯಿರಿ.

ನಂತರ ಒಂದೊಂದೇ ತರಕಾರಿ ಸೇರಿಸಿ ಸ್ವಲ್ಪ ಹುರಿದು ಅದಕ್ಕೆ ೪ ಕಪ್ ನೀರು ಉಪ್ಪು ಸೇರಿಸಿ ಕುದಿಯಲು ಬಿಡಿ.

ಆಮೇಲೆ ಅದಕ್ಕೆ ಕೆಂಪು ಮೆಣಸಿನ ಸಾಸ್, ಕರಿಮೆಣಸಿನ ಪುಡಿ ಹಾಗು ಓಟ್ಸ್ ಸೇರಿಸಿ ಕುದಿಸಿ.

ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿ ಸರ್ವ್ ಮಾಡಿ. 

comments powered by Disqus