Manjushree's Kairuchi
Untitled Document

ಬೀಟ್ರೂಟ್ ಪರಾಟ

Image
  • ಶೈಲಿ :ಫ್ಯೂಶನ್
  • ಸರ್ವ್ :2
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ತುರಿದ ಬೀಟ್ರೂಟ್ ೨ ಕಪ್
  • ಗೋಧಿ ಹಿಟ್ಟು ೧ ಕಪ್
  • ಎಣ್ಣೆ ೩ ಟೇ ಚ
  • ತುಪ್ಪ ೩ ರಿಂದ ೪ ಟೇ ಚ
  • ಉಪ್ಪು ರುಚಿಗೆ
  • ಜೀರಿಗೆ ೧ ಟೀ ಚ
  • ಹೆಚ್ಚಿದ ಹಸಿಮೆಣಸು ೧ ಟೇ ಚ
  • ಅಮ್ಚುರ್ ಪುಡಿ ೧ ಟೀ ಚ
  • ಹೆಚ್ಚದ ಶುಂಟಿ ೧ ಟೀ ಚ
  • ತೆಂಗಿನತುರಿ ೧/೨ ಕಪ್
  • ಕೊತ್ತೊಂಬರಿ ಸೊಪ್ಪು

ಮಾಡುವ ವಿಧಾನ

"ಬೀಟ್ರೂಟ್  ಪರಾಟ" ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ.

ಮೊದಲು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಹಾಗು ನೀರು ಸೇರಿಸಿ ಚಪಾತಿ ಹಿಟ್ಟಿನಂತೆ ಮೃದುವಾದ ಹಿಟ್ಟನ್ನು ತಯಾರಿಸಿ ಇಟ್ಟುಕೊಳ್ಳಿ.

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ, ಜೀರಿಗೆ, ಹಸಿಮೆಣಸು, ಶುಂಟಿ ಹಾಗು ಬೀಟ್ರೂಟ್ ಸೇರಿಸಿ ಅದಕ್ಕೆ ಉಪ್ಪು ಹಾಕಿ ತೊಳೆಸಿ ನೀರಿನಂಶ ಹೋಗುವವರೆಗೆ ಬೇಯಿಸಿ.

ನಂತರ ತೆಂಗಿನತುರಿ, ಕೊತ್ತೊಂಬರಿ ಸೊಪ್ಪು ಹಾಗು ಅಮ್ಚುರ್ ಸೇರಿಸಿ ಮಿಶ್ರಣತಯರಿಸಿಕೊಳ್ಳಿ.

ಗೋಧಿ ಹಿಟ್ಟನ್ನು ನಿಂಬೆ ಗಾತ್ರದ ಉಂಡೆ ಮಾಡಿ ಸ್ವಲ್ಪ ಲಟ್ಟಿಸಿ, ಮದ್ಯೆ ಬೀಟ್ರೂಟ್ ಮಿಶ್ರಣ ತುಂಬಿ, ಮತ್ತೆ ಚಪಾತಿಯಂತೆ ದೊಡ್ಡಕ್ಕೆ ಲಟ್ಟಿಸಿ ಕಾದ ತವಾದ ಮೇಲೆ ತುಪ್ಪ ಹಾಕಿ ಎರಡು ಕಡೆ ಬೇಯಿಸಿ.

ಇದನ್ನು ಹಾಗೆಯೇ ಮೊಸರಿನ ಜೊತೆಗೆ ಸರ್ವ್ ಮಾಡಿ.

comments powered by Disqus