Manjushree's Kairuchi
Untitled Document

ಪಾಲಕ್ ಪಾಸ್ತಾ

Image
  • ಶೈಲಿ :ಇಟಾಲಿಯನ್
  • ಸರ್ವ್ :2
  • ಸಮಯ :30 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಪಾಲಕ್ ೧ ಗೊಂಚಲು
  • ಪಾಸ್ತಾ ೧ ಕಪ್
  • ತೆಂಗಿನ ಹಾಲು ೧ ಕಪ್
  • ಕ್ಯಾಪ್ಸಿಕಂ ೧
  • ಹೆಚ್ಚಿದ ಟೊಮೇಟೊ ೧ ಕಪ್
  • ಈರುಳ್ಳಿ ೧
  • ಉಪ್ಪು ರುಚಿಗೆ
  • ಇಟಾಲಿಯನ್ ಹರ್ಬ್ಸ್ ೧/೨ ಟೀ ಚಮಚ
  • ಕೆಂಪು ಮೆಣಸಿನ ಪುಡಿ ೧ ಟೀ ಚಮಚ
  • ಹೆಚ್ಚಿದ ಬೆಳ್ಳುಳ್ಳಿ ೧ ಟೀ ಚಮಚ
  • ಕೊತ್ತೊಂಬರಿ ಸೊಪ್ಪು
  • ಸೋಂಪು ೧ ಟೀ ಚಮಚ
  • ಬೆಣ್ಣೆ ೨ ಟೇಬಲ್ ಚಮಚ
  • ಕರಿಮೆಣಸಿನ ಪುಡಿ

ಮಾಡುವ ವಿಧಾನ

"ಪಾಲಕ್ ಪಾಸ್ತಾ "ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ.

ಮೊದಲು ಪಾಲಕ್ ಅನ್ನು ಚೆನ್ನಾಗಿ ತೊಳೆದು ಕುದಿಯುತ್ತಿರುವ ನೀರಿಗೆ ಹಾಕಿ ೫ ನಿಮಿಷ ಬಿಟ್ಟು ನೀರೆಲ್ಲ ಬಸಿದು, ಪಾಲಕ್ ಸೊಪ್ಪನ್ನು ಹಿಂಡಿ ಉಳಿದ ನೀರನ್ನು ತೆಗೆದು, ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.

ಪಾಸ್ತಾ ವನ್ನು ಕುದಿಯುವ ನೀರಿಗೆ ಹಾಕಿ ಬೇಯಿಸಿ ಇಟ್ಟುಕೊಳ್ಳಿ.

ಒಂದು ಬಾಣಲೆ ಬಿಸಿ ಮಾಡಿ ಅದಕ್ಕೆ ಸೋಂಪು ಬೆಳ್ಳುಳ್ಳಿ ಹಾಗು ಈರುಳ್ಳಿ ಸೇರಿಸಿ ಹುರಿಯಿರಿ.

ನಂತರ ಅದಕ್ಕೆ ಕ್ಯಾಪ್ಸಿಕಂ ಹಾಗು ಟೊಮೇಟೊ ಸೇರಿಸಿ ಫ್ರೈ ಮಾಡಿ.

ಟೊಮೇಟೊ ಬೆಂದ ನಂತರ ಅದಕ್ಕೆ ಪಾಲಕ್ ಪೇಸ್ಟ್, ತೆಂಗಿನ ಹಾಲು, ಕೆಂಪು ಮೆಣಸು, ಉಪ್ಪು, ಕರಿಮೆಣಸು ಹಾಗು ಇಟಾಲಿಯನ್ ಹರ್ಬ್ಸ್ ಹಾಕಿ ತೊಳೆಸಿ, ಬೆಂದ ಪಾಸ್ತಾ ಹಾಕಿ ಚೆನ್ನಾಗಿ ಹೊಂದಿಸಿ ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ.

comments powered by Disqus