Manjushree's Kairuchi
Untitled Document

ಬಾರ್ಲಿ ಸೂಪ್

Image
  • ಶೈಲಿ :ಟಿಬೆಟಿಯನ್
  • ಸರ್ವ್ :2
  • ಸಮಯ :1 ಗಂಟೆ

ಬೇಕಾಗುವ ಸಾಮಗ್ರಿಗಳು

  • ಬಾರ್ಲಿ ೧/೨ ಕಪ್
  • ಟೊಮೇಟೊ ೧
  • ಈರುಳ್ಳಿ ೧
  • ಬೆಳ್ಳುಳ್ಳಿ ೨ ಎಸಳು
  • ಕ್ಯಾರಟ್ ೧
  • ಕ್ಯಾಪ್ಸಿಕಂ ೧/೪ ಭಾಗ
  • ಬೀನ್ಸ್ ೩ ರಿಂದ ೪
  • ಹಸಿರು ಬಟಾಣಿ ೨ ಟೇಬಲ್ ಚಮಚ
  • ಉಪ್ಪು ರುಚಿಗೆ
  • ಸಾಂಬಾರ್ ಪುಡಿ/ ಕರ್ರಿ ಪುಡಿ ೧/೪ ಟೀ ಚಮಚ
  • ಬೆಣ್ಣೆ ೧/೪ ಟೀ ಚಮಚ
  • ಕೊತ್ತೊಂಬರಿ ಸೊಪ್ಪು

ಮಾಡುವ ವಿಧಾನ

ಬಾರ್ಲಿ ಇದು ಹುಲ್ಲಿನ ಕುಟುಂಬಕ್ಕೆ ಸೇರಿದ ಪ್ರಮುಖ ಏಕದಳ ಧಾನ್ಯ. ಇದು ಕೃಷಿಯ ಮೊದಲ ಧಾನ್ಯವಾಗಿದ್ದು ಇದೀಗ ವ್ಯಾಪಕವಾಗಿ ಬೆಳೆಸಲಾಗಿದೆ. ಬಾರ್ಲಿ ಟಿಬೆಟಿಯನ್ ರ ಒಂದು ಪ್ರಧಾನ ತಿನಿಸು ಮತ್ತು ಮಧ್ಯಕಾಲೀನ ಯುರೋಪ್ನಲ್ಲಿ ರೈತರು ವ್ಯಾಪಕವಾಗಿ ಬೆಳೆಯುತ್ತಿದ್ದ ಒಂದು ಬೆಳೆಯೂ ಹೌದು. ಇದನ್ನು ತುಂಬಾ ವಿಧದ ಭಕ್ಷ್ಯಗಳಲ್ಲಿ ಉಪಯೋಗಿಸಿತ್ತಾರೆ. ಇಂತಹ ಆರೋಗ್ಯಕರ ಬಾರ್ಲಿ ಯಿಂದ ರುಚಿಕರ ಸೂಪ್ ನಿಮಗಾಗಿ ಮಾಡಿ ಅಭಿಪ್ರಾಯ ತಿಳಿಸಿ. (ಕೃಪೆ ವಿಕಿಪೀಡಿಯ)

 

ಮೊದಲು ಬಾರ್ಲಿಯನ್ನು ತೊಳೆದು ಅರ್ಧ ಗಂಟೆ ನೆನೆಸಿ.  ಕುಕ್ಕರ್ ನಲ್ಲಿ ಬೇಯಿಸಿ ಇಟ್ಟುಕೊಳ್ಳಿ.

ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.

ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿಮಾಡಿ, ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹುರಿದು, ಹಾಗೆ ಈರುಳ್ಳಿ ಹಾಕಿ ಹುರಿಯಿರಿ.

ನಂತರ ಅದಕ್ಕೆ ಟೊಮೇಟೊ ಹಾಕಿ ಬಾಡಿಸಿ, ಉಳಿದ ತರಕಾರಿಗಳನ್ನು ಹಾಕಿ.

ಆಮೇಲೆ ಅದಕ್ಕೆ ೨ ರಿಂದ ೩ ಕಪ್ ನೀರು ಹಾಗು ಉಪ್ಪು ಸೇರಿಸಿ ಕುಡಿಯಲು ಬಿಡಿ.

ನಂತರ ಅದಕ್ಕೆ ಬೇಯಿಸಿದ ಬಾರ್ಲಿ, ಕರ್ರಿ ಪೌಡರ್ ಹಾಕಿ ಕುಡಿಸಿ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ. 

comments powered by Disqus