Manjushree's Kairuchi
Untitled Document

ಹೆಸರುಕಾಳಿನ ಕೋಸಂಬರಿ

Image
  • ಶೈಲಿ :ದಕ್ಷಿಣ ಭಾರತ
  • ಸರ್ವ್ :2
  • ಸಮಯ :30 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಮೊಳಕೆ ಬಂದ ಹೆಸರು ಕಾಳು ೧ ಕಪ್
  • ತೆಂಗಿನ ತುರಿ ೧/೨ ಕಪ್
  • ಕ್ಯಾರಟ್ ತುರಿ ೧ ಕಪ್
  • ಹಸಿಮೆಣಸು ಶುಂಟಿ ಪೇಸ್ಟ್ ೧ ಟೀ ಚಮಚ
  • ಉಪ್ಪು ರುಚಿಗೆ
  • ಲಿಂಬೆ ರಸ ೧ ಟೇಬಲ್ ಚಮಚ
  • ಸಾಸಿವೆ ೧/೪ ಟೀ ಚಮಚ
  • ಎಣ್ಣೆ ೧ ಟೀ ಚಮಚ
  • ಕರಿಬೇವು ೩ ರಿಂದ ೪
  • ಉದ್ದಿನಬೇಳೆ ೧/೪ ಟೀ ಚಮಚ
  • ಇಂಗು ಸ್ವಲ್ಪ

ಮಾಡುವ ವಿಧಾನ

ದಕ್ಷಿಣ ಭಾರತದಲ್ಲಿ ಅದು ಕರ್ನಾಟಕದಲ್ಲಿ ಕೋಸಂಬರಿ ತುಂಬಾ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ಹಬ್ಬ ಹರಿದಿನ, ಮಾಡುವೆ ಮುಂಜಿ ಗಳಲ್ಲಿ ಕೋಸಂಬರಿ ಯನ್ನು ಎಲೆಕೊನೆಗೆ ಬಳಿಸಲು ಮಾಡಿಯೇ ಮಾಡುತ್ತಾರೆ. ಇದನ್ನು ಹಾಗೆಯೂ ಸಂಜೆಯ ಉಪಹಾರವಾಗಿ ತಿನ್ನಬಹುದು. ಹಾಗೆಯೇ ಕೋಸಂಬರಿ ಆರೋಗ್ಯಕ್ಕೆ ಒಳ್ಳೆಯದು ಕೂಡ. ಇದನ್ನು ಬೇರೆ ಬೇರೆ ವಿಧಾನ ದಲ್ಲಿ ತಯಾರಿಸುತ್ತಾರೆ. ಊಟದ ಮೊದಲು ೧ ಕಪ್ ನಂತೆ ಈ ಕೋಸಂಬರಿ ತಿನ್ನುತ್ತ ಬಂದರೆ ದೇಹದ ತೂಕ ಇಳಿಯುತ್ತದೆ."ಹೆಸರುಕಾಳಿನ ಕೋಸಂಬರಿ " ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ. 

ಹೆಸರುಕಾಳನ್ನು ತೊಳೆದು ರಾತ್ರಿಯಿಡಿ ನೆನೆಹಾಕಿ, ನಂತರ ನೀರೆಲ್ಲ ಬಸಿದು ಕಾಳನ್ನು ಗಾಳಿಯಾಡದ ಡಬ್ಬಿಯಲ್ಲಿ ೬ ರಿಂದ ೭ ಗಂಟೆ ಬಿಟ್ಟರೆ ಚೆನ್ನಾಗಿ ಮೊಳಕೆ ಬರುತ್ತದೆ.

ಒಂದು ಪಾತ್ರೆಗೆ ಮೊಳಕೆ ಬಂದ ಹೆಸರುಕಾಳು, ತುರಿದ ಕ್ಯಾರಟ್, ತೆಂಗಿನ ತುರಿ, ಹಸಿಮೆಣಸಿನ ಪೇಸ್ಟ್, ಉಪ್ಪು ಹಾಗು ನಿಂಬೆರಸ ಸೇರಿಸಿ ಚೆನ್ನಾಗಿ ಹೊಂದಿಸಿ.

ನಂತರ ಒಗ್ಗರಣೆಗೆ ಎಣ್ಣೆ ಬಿಸಿಮಾಡಿ, ಉದ್ದಿನಬೇಳೆ, ಸಾಸಿವೆ, ಇಂಗು ಹಾಗು ಕರಿಬೇವು ಸೇರಿಸಿ ಸಿಡಿಸಿ ಕೊಸಂಬರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.  

 

 

comments powered by Disqus