Manjushree's Kairuchi
Untitled Document

ಅಲೂ ಗೋಬಿ ಮಂಚೂರಿಯನ್

Image
  • ಶೈಲಿ :ಇಂಡೋ - ಚೈನೀಸ್
  • ಸರ್ವ್ :2
  • ಸಮಯ :45 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಆಲೂಗಡ್ಡೆ ೨
  • ಹೂ ಕೋಸಿನ ಚೂರುಗಳು ೧ ಕಪ್
  • ಕಾರ್ನ್ ಫ್ಲೋರ್ ೫ ಟೇಬಲ್ ಚಮಚ
  • ಅಕ್ಕಿ ಹಿಟ್ಟು ೧ ಟೇಬಲ್ ಚಮಚ
  • ಮೈದಾ ೨ ಟೇಬಲ್ ಚಮಚ
  • ಕರಿಮೆಣಸಿನ ಪುಡಿ ೧ ಟೀ ಚಮಚ
  • ಕೆಂಪು ಮೆಣಸಿನ ಪುಡಿ ೧ ಟೇಬಲ್ ಚಮಚ
  • ಸೋಯಾ ಸಾಸ್ ೩ ಟೇಬಲ್ ಚಮಚ
  • ಟೊಮೇಟೊ ಸಾಸ್ ೪ ಟೇಬಲ್ ಚಮಚ
  • ವಿನೆಗರ್ ೧ ಟೀ ಚಮಚ
  • ಉಪ್ಪು ರುಚಿಗೆ
  • ಹಸಿಮೆಣಸು ೨
  • ಹೆಚ್ಚಿದ ಈರುಳ್ಳಿ ೧/೪ ಕಪ್
  • ಹೆಚ್ಚಿದ ಕ್ಯಾಪ್ಸಿಕಂ ೧/೪ ಕಪ್
  • ಹೆಚ್ಚಿದ ಈರುಳ್ಳಿ ಹೂವು ೧/೪ ಕಪ್
  • ಕೊತ್ತೊಂಬರಿ ಸೊಪ್ಪು ಸ್ವಲ್ಪ
  • ಹೆಚ್ಚಿದ ಶುಂಟಿ & ಬೆಳ್ಳುಳ್ಳಿ ೧ ಟೇಬಲ್ ಚಮಚ
  • ಎಣ್ಣೆ ಕರಿಯಲು

ಮಾಡುವ ವಿಧಾನ

ಸಾಮಾನ್ಯವಾಗಿ ಗೋಬಿ ಮಂಚೂರಿಯನ್, ಹಾಗೆ ತುಂಬಾ ವಿಧಾನದ ಮಂಚೂರಿಯನ್ ಗಳನ್ನೂ ತಯಾರಿಸುತ್ತಾರೆ. ಹಾಗೆಯೇ ಇದು ಒಂದು ವಿನೂತನ ಶೈಲಿಯ ಮಂಚೂರಿಯನ್ .ಅಲೂ ಗೋಬಿ ಮಂಚೂರಿಯನ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ. 

  • ಮೊದಲು ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಕಿವುಚಿ ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಕರಿಮೆಣಸಿನ ಪುಡಿ ಸೇರಿಸಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಿ.
  • ನಂತರ ಮೈದಾ, ಕಾರ್ನ್ ಫ್ಲೋರ್, ಕೆಂಪುಮೆಣಸಿನಪುಡಿ,೧ ಚಮಚ ಸೋಯಾಸಾಸ್, ಉಪ್ಪು ಹಾಗೂ ಅಕ್ಕಿ ಹಿಟ್ಟನ್ನು ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ
  • ಹೂ ಕೋಸಿನ ಚೂರುಗಳನ್ನು ತೆಗೆದುಕೊಳ್ಳಿ ಆಲೂಗಡ್ಡೆ ಉಂಡೆಯ ಒಳಗೆ ಹೂಕೋಸಿನ ಚೂರುಗಳನ್ನು ತುಂಬಿ ಮೈದಾಹಿಟ್ಟಿನ ಮಿಶ್ರಣದಲ್ಲಿ ಅಡ್ಡಿಕಾದ ಎಣ್ಣೆಯಲ್ಲಿ ಕರಿದು ತೆಗೆದಿಟ್ಟುಕೊಳ್ಳಿ.
  • ನಂತರ ಸ್ವಲ್ಪ ಎಣ್ಣೆ ಬಿಸಿ ಮಾಡಿ ಶುಂಟಿ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ ಹುರಿದು ಅದಕ್ಕೆ ಉಳಿದ ಸೋಯಾಸಾಸ್, ಟೊಮೇಟೊ ಸಾಸ್ ಹಾಗೂ ವಿನೆಗರ್ ಸೇರಿಸಿ ಮತ್ತೆ ಹುರಿಯಿರಿ. ಅದಕ್ಕೆ ಕರಿದಿಟ್ಟ ಹೂಕೊಸುಗಳನ್ನು ಸೇರಿಸಿ ಮತ್ತೆ ತೊಳೆಸಿ
  • ಒಂದು ಪಾತ್ರೆಯಲ್ಲಿ ೧ ಚಮಚ ಕಾರ್ನ್ ಫ್ಲೋರ್ ಹಾಗೂ ಸ್ವಲ್ಪ ನೀರು ಸೇರಿಸಿ ಆ ಮಿಶ್ರಣವನ್ನು ಒಗ್ಗರಣೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ಕೊನೆಯಲ್ಲಿ ಈರುಳ್ಳಿ ಹೂವು ಹಾಗೂ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ ಫ್ರೈಡ್ ರೈಸ್ ಜೊತೆ ತಿನ್ನಲು ಕೊಡಿ.
comments powered by Disqus