Manjushree's Kairuchi
Untitled Document

ಡೇಟ್ಸ್ ರೋಲ್

Image
 • ಶೈಲಿ :ಫ್ಯೂಶನ್
 • ಸರ್ವ್ :2
 • ಸಮಯ :2 ಗಂಟೆ

ಬೇಕಾಗುವ ಸಾಮಗ್ರಿಗಳು

 • ಬೆಣ್ಣೆ ೫ ೦ಗ್ರಾಂ
 • ಡ್ರೈಫ್ರೂಟ್ಸ ೧೦೦ ಗ್ರಾಂ ( ಒಣದ್ರಾಕ್ಷಿ
 • ಗೋಡಂಬಿ
 • ಬಾದಾಮಿ )
 • ಖರ್ಜೂರ ೨೫೦ ಗ್ರಾಂ
 • ಕಂಡೆನ್ಸೆಡ್ ಮಿಲ್ಕ್ ೨೦೦ ಗ್ರಾಂ
 • ಹಾಲಿನ ಪುಡಿ ೪ ಟೇಬಲ್ ಚಮಚ
 • ಗಸಗಸೆ ೨ ಟೇಬಲ್ ಚಮಚ

ಮಾಡುವ ವಿಧಾನ

ಸಾಮಾನ್ಯವಾಗಿ ಮಕ್ಕಳಿಗೆ ಪೋಷಕಂಶವನ್ನು ಒದಗಿಸುವದು ಸ್ವಲ್ಪ ಕಷ್ಟಕರವಾದ ಕೆಲಸ, ಹೀಗೆ ಮಾಡಿಕೊಟ್ಟರೆ ಮಕ್ಕಳಿಗೂ ಒಳ್ಳೆಯದು ಹಾಗು ರುಚಿಕರವಾಗಿಯು ಇರುತ್ತದೆ. ಇದನ್ನು ನಾನು ಜೀ ಕನ್ನಡ ವಾಹಿನಿಯ ಒಗ್ಗರಣೆ ಡಬ್ಬಿಯಿಂದ ಕಲಿತ ಅಡುಗೆ. 

 • ಬೆಣ್ಣೆ ಬಿಸಿ ಮಾಡಿ ಅದಕ್ಕೆ ಡ್ರೈಫ್ರೂಟ್ಸ ಸೇರಿಸಿ ಹುರಿಯಿರಿ ಅದಕ್ಕೆ ಬೀಜ ತೆಗೆದ ಖರ್ಜೂರ ಹಾಕಿ ಚೆನ್ನಾಗಿ ಬಾಡಿಸಿ.
 • ನಂತರ ಅದಕ್ಕೆ ಕಂಡೆನ್ಸೆಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಹೊಂದಿಸಿ ಅದಕ್ಕೆ ಹಾಲಿನಪುಡಿ ಸೇರಿಸಿ ತೊಳೆಸಿ.
 • ನಂತರ ಈ ಮಿಶ್ರಣವನ್ನು ಬಟರ್ ಪೇಪರ್ ಮೇಲೆ  ಹಾಕಿ ರೋಲ್ ಮಾಡಿ .
 • ನಂತರ ಗಸಗಸೆಯ ಮೇಲೆ ಹೊರಳಿಸಿ ಬಟರ್ಪೇಪರ್ನಲ್ಲಿಸುತ್ತಿ ಫ್ರಿಜ್ನಲ್ಲಿ ೨ ಗಂಟೆಗಳ ಕಾಲ ಇಡಿ.
 • ನಂತರ ಕತ್ತರಿಸಿ ತಿನ್ನಲು ಕೊಡಿ.
comments powered by Disqus