Manjushree's Kairuchi
Untitled Document


ನಾನು ಮೂಲತಃ ಸಹ್ಯಾದ್ರಿಯ ತಪ್ಪಲಿನಲ್ಲಿರುವ ಉತ್ತರ ಕನ್ನಡದ ಪ್ರಕೃತಿ ಸೌಂದರ್ಯದ ಮಧ್ಯೆ ಒಂದು ಹಳ್ಳಿಯ ಹವ್ಯಕ ಮನೆತನದಲ್ಲಿ ಹುಟ್ಟಿ, ಬೆಳೆದ ಹುಡುಗಿ. ಸ್ನಾತಕೋತ್ತರ ಪದವೀಧರೆ. ೪ ವರುಷಗಳ ಕಾಲ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡಿದ ತೃಪ್ತಿ. ಈಗ ಸಂಸಾರವೆಂಬ ಸುಂದರ ಬದುಕಿನಲ್ಲಿ ಸಂತೃಪ್ತಿಯ ಜೀವನ.

ನಮ್ಮದು ಅಪ್ಪಟ ಸಸ್ಯಾಹಾರಿ ಮನೆತನ. ಮೊದಲಿನಿಂದಲೂ ಅಡಿಗೆಯಲ್ಲಿ ಆಸಕ್ತಿ ಇದ್ದ ನಾನು ವಿಧ ವಿಧದ ಅಡಿಗೆಗಳನ್ನು ಕಲಿಯುವ ಪ್ರಯತ್ನದಲ್ಲಿ, ಕೆಲವೊಂದು ಸಾರಿ ಅದರಲ್ಲಿ ಸೋಲು ಕೆಲವೊಮ್ಮೆ ಗೆಲುವು ಹೀಗೆ ಸಾಗುತ್ತ ಈಗ ನನ್ನದೇ ಆದ ಶೈಲಿಯಲ್ಲಿ ನಮ್ಮ ಸಾಂಪ್ರದಾಯಿಕ ಅಡಿಗೆಗಳು, ಉತ್ತರಭಾರತ, ದಕ್ಷಿಣಭಾರತ, ಪಾಶ್ಚಾತ್ಯ ದೇಶಗಳ ಸಸ್ಯಾಹಾರಿ ಅಡಿಗೆಗಳ ಜೊತೆಗೆ ಮಾಂಸಾಹಾರಿ ಅಡಿಗೆಗಳನ್ನು ಸಸ್ಯಹಾರಕ್ಕೆ ಬದಲಿಸಿ ಅದನ್ನು ಆದಷ್ಟು ಸರಳ ರೀತಿಯಲ್ಲಿ ನಿಮ್ಮಮುಂದೆ ಇಡುವ ಪ್ರಯತ್ನವೇ ಈ "ಕೈರುಚಿ"

ಈಗಿನ ಗಡಿಬಿಡಿಯ ಜೀವನ ಶೈಲಿಯಲ್ಲಿ ಫಾಸ್ಟ್ ಫುಡ್ ಗಳು ನಮ್ಮ ದೈನಂದಿನ ಜೀವನದಲ್ಲಿ ನೆಲೆಯುರಿವೆ ಬೇಗ ಬೇಗ ಮಾಡಿ ಮುಗಿಸಿ ಆಫೀಸ್ ಗೆ ಹೊರಡುವ ಕಾತುರತೆ ಉದ್ಯೋಗದಲ್ಲಿ ಇರುವವರಿಗದರೆ, ಟಿವ ಸೀರಿಯಲ್ ಗಳು, ಲೇಡೀಸ್ ಕ್ಲಬ್, ಇನ್ನಿತರ ಚಟುವಟಿಕೆಯಲ್ಲಿ ಮನೆಯಲ್ಲಿರುವ ಗ್ರಹಿಣಿಯರಿಗೆ, ಹೀಗೆ ನಮ್ಮ ಸಾಂಪ್ರದಾಯಿಕ ಅಡಿಗೆಗಳು ಮೂಲೆಗುಂಪಾಗಿವೆ, ಎಲ್ಲ ರೀತಿಯ ಅಡಿಗೆಗಳು ನಮಗೆ ನಮ್ಮ ನಾಲಿಗೆಗೆ ಅತ್ಯವಶ್ಯಕ ನಾನೇನು ಹೊಸ ಅಡಿಗೆಗಳ ವಿರೋಧಿ ಖಂಡಿತ ಅಲ್ಲ ಆದರೆ ಹೊಸದರ ಜೊತೆಜೊತೆಗೆ ಅಜ್ಜಿ, ಅಮ್ಮನ ಕಾಲದ ಅಡಿಗೆಗಳಿಗೂ ನೀರೆರೆದು ಮುಂದಿನ ಪೀಳಿಗೆಗೆ ಒಪ್ಪಿಸುವುದು ಅವಶ್ಯಕ. ಇಂಥದ್ದೊಂದು ಸಣ್ಣ ಪ್ರಯತ್ನವೇ ಈ "ಮಂಜುಶ್ರೀ ಕೈರುಚಿ". ಇಲ್ಲಿ ಎಲ್ಲ ರೀತಿಯ ಸಸ್ಯಾಹಾರಿ ಅಡಿಗೆಗಳಿಗೆ ಪ್ರಾಮುಖ್ಯತೆ ಖಂಡಿತ ಇದೆ, ನಮ್ಮ ಹವ್ಯಕ ಬ್ರಾಹ್ಮಣರ ಸಾಂಪ್ರದಾಯಿಕ ಅಡಿಗೆಗಳು, ದಕ್ಷಿಣ ಭಾರತ ಶೈಲಿ , ಉತ್ತರ ಭಾರತ ಶೈಲಿ, ಕಾಂಟಿನೆಂಟಲ್, ಚೈನೀಸ್, ಮುಘಲೈ ಎಲ್ಲ ಶೈಲಿಯ ಅಡಿಗೆ, ಸಿಹಿ ತಿಂಡಿಗಳು ಹಾಗು ಪಾನೀಯಗಳನ್ನು ನಿಮಗೆ ಪರಿಚಯಿಸುವ ಜೊತೆಗೆ ನೆನಪು ಮಾಡಿಕೊಡುವ ಪ್ರಯತ್ನ ಅಷ್ಟೇ.